fbpx
ಸಮಾಚಾರ

ಟೀಮ್ ಇಂಡಿಯಾದ ಪರ ಯಾರೂ ಮಾಡದೇ ಇರುವ ದಾಖಲೆಯನ್ನು ಮಾಡಿದ ದಿನೇಶ್ ಕಾರ್ತಿಕ್! ಏನದು ಗೊತ್ತಾ?

ದಿನೇಶ್ ಕಾರ್ತಿಕ್ ಅವರಿಗೆ ಅದೃಷ್ಟ ಕೂಡಿ ಬಂದಿದೆ ಎಂದು ಹೇಳಬಹುದು. ಏಕೆಂದರೆ ಕಳೆದ ಅದೆಷ್ಟೂ ವರ್ಷಗಳಿಂದ ಇವರು ಭಾರತ ತಂಡದ ಪರ ಬ್ಯಾಟ್ ಬೀಸಿರಲಿಲ್ಲ. ಆದರೆ ಇವರು ಆರ್ ಸಿ ಬಿ ಪರ ಉತ್ತಮ ಪ್ರದರ್ಶನ ತೋರಿದ್ದ ಕಾರಣ ಇವರನ್ನು ಟೀಮ್ ಇಂಡಿಯಾ ಗೆ ಮತ್ತೆ ಆಯ್ಕೆಮಾಡಲಾಗಿತ್ತು. ಇದೀಗ ಟೀಮ್ ಇಂಡಿಯಾ ಗೆ ಆಯ್ಕೆ ಆಗಿದ್ದಲ್ಲದೆ ಟೀಮ್ ಇಂಡಿಯಾ ಪರ ಯಾರು ಮಾಡದೇ ಇರುವ ದಾಖಲೆಯನ್ನು ಮಾಡಿದ್ದಾರೆ.

2006 ರಿಂದ T20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಡಿಕೆ 2022 ಅಂದರೆ ಇಲ್ಲಿಯವರೆಗೂ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ 15 ವರ್ಷಗಳನ್ನು ಪೂರೈಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ ಇವರಿಗೆ T20 ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಪರ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ದಾಖಲೆ ಕೂಡ ಇದೆ. ಇದೀಗ ಇದರ ಜೊತೆಗೆ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ 15 ವರ್ಷಗಳನ್ನು ಪೂರೈಸಿದ ಆಟಗಾರ ಎಂಬ ದಾಖಲೆ ಕೂಡ ಸೇರಿಕೊಂಡಿದೆ.

15 ವರ್ಷಗಳ ಕಾಲ ತಂಡದ ಪರ ಆಟವಾಡಿದ ಡಿಕೆ ಕೇವಲ 33 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದರಲ್ಲಿ ಕೇವಲ 17 ಇನ್ನಿಂಗ್ಸ್ ನಲ್ಲಿ ಮಾತ್ರ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಡಿಕೆ ಇಲ್ಲಿಯವರೆಗೂ ಕೇವಲ ಒಂದೇಒಂದು ಅರ್ಧ ಶತಕ ಸಿಡಿಸಿಲ್ಲ. ಇಲ್ಲಿಯವರೆಗೂ ಡಿಕೆ ಭಾರತ ಪರ ಕಲೆಹಾಕಿರೋದು ಕೇವಲ 400 ರನ್ ಗಳನ್ನೂ ಮಾತ್ರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top