fbpx
ಮನೋರಂಜನೆ

ಸತತ ಎರಡು ಸೋಲಿಗೆ ಕಾರಣವೇನೆಂಬುದನ್ನು ತಿಳಿಸಿದ ರಿಷಬ್ ಪಂತ್!

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಎರಡನೆಯ T20 ಪಂದ್ಯದಲ್ಲಿ ಭಾರತ ಮತ್ತೆ ಮುಗ್ಗರಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನೀರಸ ಪ್ರದರ್ಶನ ತೋರುವ ಮೂಲಕ ಮತ್ತೆ ಸೋಲನ್ನು ಅನುಭವಿಸಿದ. ಪಂದ್ಯ ಮುಗಿದ ಬಳಿಕ ಭಾರತ ತಂಡದ ನಾಯಕ ರಿಷಬ್ ಪಂತ್ ಮಾತನಾಡಿದರು. ಅವರು ಏನೆಂದರು ಕೇಳಿ.

“ನಾವು 10 ರಿಂದ 15 ರನ್​ಗಳನ್ನು ಕಡಿಮೆ ಹೊಡೆದೆವು. ಮೊದಲ 7-8 ಓವರ್​ಗಳಲ್ಲಿ ಭುವನೇಶ್ವರ್ ಕುಮಾರ್ ಸೇರಿದಂತೆ ವೇಗದ ಬೌಲರ್​ಗಳು ಅತ್ಯುತ್ತಮ ಪ್ರದರ್ಶನ ತೋರಿದರು. ಆದರೆ, ನಂತರ ನಾವು ಅಂದುಕೊಂಡಂತೆ ಪಂದ್ಯ ಸಾಗಲಿಲ್ಲ. ಮೊದಲ ಹಂತದಲ್ಲಿ ನಾವು ಚೆನ್ನಾಗಿ ಬೌಲಿಂಗ್ ಮಾಡಿದೆವು, ದ್ವಿತೀಯ ಹಂತದಲ್ಲಿ ವಿಕೆಟ್ ಪಡೆಯಬೇಕಾಗಿತ್ತು. ಆದರೆ, ನಮಗೆ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ,” ಎಂದು ಮತ್ತೊಮ್ಮೆ ಬೌಲರ್​ಗಳನ್ನು ದೂಷಿಸಿದರು.

“ಕ್ಲಾಸೆನ್ ಮತ್ತು ಬವುಮಾ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾವು ಇನ್ನೂ ಚೆನ್ನಾಗಿ ಬೌಲಿಂಗ್ ಮಾಡಬಹುದಿತ್ತು. ಮುಂದಿನ ಪಂದ್ಯದಿಂದ ಈ ವಿಭಾಗದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡುತ್ತೇವೆ. ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಬೇಕಿರುವುದರಿಂದ ಕಮ್​ಬ್ಯಾಕ್ ಮಾಡುತ್ತೇವೆ,” ಎಂದು ಪಂತ್ ಹೇಳಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಗೆದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top