fbpx
ಸಮಾಚಾರ

ನೀವು ಸತ್ತ ನಂತರ ನೀವು ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳ ಕಥೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಸಂಗತಿ!

ಪ್ರತಿಯೊಬ್ಬರ ಮನಸಲ್ಲೂ ಒಂದು ಪ್ರಶ್ನೆ ಮೂಡೋದು ಸಹಜ. ನಾವು ಸತ್ತ ನಂತರ ನಾವು ಬಳಸುತ್ತಿರುವ ಸಾಮಾಜಿಕ ಜಾಲತಾಣಗಳಾದ ಕಥೆ ಏನಾಗುತ್ತದೆ ಎಂದು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿ ಆಗಿರುತ್ತಾರೆ. ಈಗಾಗಿ ನಾವು ಸತ್ತ ನಂತರ ನಮ್ಮ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾ ಹೀಗೆ ಹತ್ತು ಹಲವಾರು ಸಾಮಾಜಿಕ ಜಾಲತಾಣಗಳನ್ನು ಜನರು ಹ್ಯಾಕ್ ಮಾಡಿ ಏನಾದರು ಕೆಟ್ಟ ಸಂದೇಶ ಕಳುಹಿಸುತ್ತಾರೆ ಎಂಬ ಭಯ ಹುಟ್ಟೋದು ಸಹಜ. ಆದರೆ ಇದಕ್ಕೆ ಉತ್ತರ ನಮ್ಮ ಬಳಿ ಇದೆ.

ಫೇಸ್ಬುಕ್:
ಅತಿ ಹೆಚ್ಚು ಬೇಡಿಕೆ ಇರುವ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ಕೂಡ ಒಂದು. ಆದ್ದರಿಂದ ಸೆಕ್ಯೂರಿಟಿ ವಿಷಯದಲ್ಲಿ ಇದು ಸ್ವಲ್ಪ ಮುಂಚೂಣಿಯಲ್ಲಿರುತ್ತದೆ. ಫೇಸ್ಬುಕ್ ನಲ್ಲಿ ನೀವು ಸತ್ತ ನಂತರ ನಿಮ್ಮ ಖಾತೆಯನ್ನು ಯಾರೂ ನಿರ್ವಹಿಸಬೇಕೆಂದು ಮೊದಲೇ ಖಚಿತಪಡಿಸಿಕೊಳ್ಳುವಂತಹ ಫೀಚರ್ ಇದೆ. ಇದಕ್ಕೆ ಮೊದಲು ನಿಮ್ಮ ಫೇಸ್‌ಬುಕ್ ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿ ‘ಲಿಗಸಿ ಕಾಂಟ್ಯಾಕ್ಟ್’ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ, ನೀವು ಸತ್ತ ನಂತರ ಆ ವ್ಯಕ್ತಿ ನಿಮ್ಮ ಖಾತೆಯನ್ನು ಉಪಯೋಗಿಸಬಹುದು.

 

 

ಇನ್​ಸ್ಟಾಗ್ರಾಮ್:
ಫೇಸ್ಬುಕ್ ಬಳಿಕ ಅತಿ ಹೆಚ್ಚು ಬಳಕೆ ಆಗುತ್ತಿರುವ ಸಾಮಾಜಿಕ ಜಾಲತಾಣ ಎಂದರೆ ಅದು ಇನ್​ಸ್ಟಾಗ್ರಾಮ್. ಇನ್​ಸ್ಟಾಗ್ರಾಮ್ ನಲ್ಲಿ ಸತ್ತ ನಂತರ ತಮ್ಮ ಖಾತೆಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವ ಅವಕಾಶವಿದೆ. ಇದನ್ನು ನಡೆಸಲು ಜನರು ಮರಣದ ಪುರಾವೆಯೊಂದಿಗೆ ಇನ್​ಸ್ಟಾಗ್ರಾಮ್ ಅನ್ನು ಸಂಪರ್ಕಿಸಬೇಕು.

 

 

ಟ್ವಿಟ್ಟರ್:
ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣವೆಂದರೆ ಅದು ಟ್ವಿಟ್ಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟರ್​ಗೆ ಮನವಿ ಮಾಡಿಕೊಳ್ಲಲು ಅವಕಾಶವಿದೆ. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದುಹಾಕಲಾಗುವುದು. ಮರಣಪ್ರಮಾಣ ಪತ್ರ ಸಲ್ಲಿಸುವುದು ಅನಿವಾರ್ಯ.

 

 

ಜಿ- ಮೇಲ್:
ಇದರಲ್ಲಿ ಖಾತೆಯನ್ನು ನಿಷ್ಕ್ರಿಯಗೊಳಿಸಲು ಗೂಗಲ್ ನಲ್ಲಿ ‘ಪ್ರಿ ಸೆಲೆಕ್ಟೆಡ್‌ ಪೀರಿಡ್’ ಆಯ್ಕೆ ಮತ್ತು ಖಾತೆ ಡಿಆಕ್ಟಿವ್ ಮಾಡಲು ಕುಟುಂಬ ಸದಸ್ಯರಿಗೆ ಆಕ್ಸಸ್‌ ನೀಡುವ ಆಯ್ಕೆಗಳನ್ನು ನೀಡಿದೆ. ಬಳಕೆದಾರರು ಪ್ರಿ ಸೆಲೆಕ್ಟೆಡ್ ಪೀರಿಡ್ ಆಯ್ಕೆಯನ್ನು ಡಿಆಕ್ಟಿವ್ ಮಾಡುವ ಅವಕಾಶ ಇದೆ. ಬಳಕೆದಾರ ಇಲ್ಲವಾದಾಗ ಅವರ ಕುಟುಂಬ ಸದಸ್ಯರು ಖಾತೆ ಡಿಆಕ್ಟಿವ್ ಮಾಡುವ ಅವಕಾಶ ಗೂಗಲ್ ನೀಡಿದೆ.

 

ಯೂ ಟ್ಯೂಬ್:
ಬೇರೆಲ್ಲ ಸಾಮಾಜಿಕ ಜಾಲತಾಣಗಳಿಗೆ ಹೋಲಿಸಿದರೆ ಯು ಟ್ಯೂಬ್ ನಲ್ಲಿ ಹೆಚ್ಚಿನ ಭದ್ರತೆ ನೀಡುವುದು ಅನಿವಾರ್ಯ. ಏಕೆಂದರೆ ಇದರಲ್ಲಿ ಹೆಚ್ಚಿನ ಜನರು ಹಣ ಸಂಪಾದನೆ ಮಾಡುತ್ತಾರೆ. ನಿಮ್ಮ ಸಾವಿನ ಬಳಿಕ ನಿಮ್ಮ ಚಾನೆಲ್ ಅನ್ನು ಯಾರು ನಿರ್ವಹಿಸಬಹುದು ಎನ್ನುವ ಬಗ್ಗೆ ಒಂದು ಕಾನೂನು ಪತ್ರ ಸಲ್ಲಿಸಬೇಕು. ಇದನ್ನು ನೀವು ಮಾಡದೇ ಇದ್ದರೆ ಕೆಲವು ಸಮಯದ ತನಕ ಯಾವುದೇ ಪ್ರತಿಕ್ರಿಯೆ ಇಲ್ಲದೆ ಇರುವಂತಹ ನಿಮ್ಮ ಖಾತೆಯನ್ನು ಯೂ ಟ್ಯೂಬ್ ಮುಚ್ಚುತ್ತದೆ. ನೀವು ಗೂಗಲ್​ನ ಇನ್ ಆ್ಯಕ್ಟಿವ್ ಅಕೌಂಟ್ ಮ್ಯಾನೇಜರ್ ಮೂಲಕ ಒಬ್ಬ ನಂಬಿಕಸ್ಥ ವ್ಯಕ್ತಿಗೆ ಖಾತೆಯ ನಿರ್ವಹಣೆ ನೀಡಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top