ಸ್ಯಾಂಡಲ್ವುಡ್ ನ ಖ್ಯಾತ ನಿರೂಪಕಿ ಅನುಶ್ರೀ ಎಂದರೆ ಎಲ್ಲರಿಗು ಅಚ್ಚುಮೆಚ್ಚು. ಆದರೆ ಅನುಶ್ರೀ ಇಲ್ಲಿಯರೆಗೂ ತಮ್ಮ ಮದುವೆಯ ವಿಚಾರದ ಬಗ್ಗೆ ಎಲ್ಲಿಯೂ ಸಹ ತಿಳಿಸಿರಲಿಲ್ಲ. ಇದೇ ಮೊದಲ ಬಾರಿಗೆ ತಾವು ಮದುವೆಯಾಗಲು ಇಚ್ಚಿಸುತ್ತಿದೇನೆ ಎಂದು ಹೇಳಿದ್ದು, ಅಭಿಮಾನಿಗಳಲ್ಲಿ ಸಂತಸ ಜೊತೆಗೆ ಹುಡುಗ ಯಾರಿರಬಹುದು ಎಂಬ ಗೊಂದಲ ಕಾಡುತ್ತಿದೆ.
ಸಿನಿಮಾದ ಮೂಲಕ ಜನರನ್ನು ರಂಜಿಸುತ್ತಿದ್ದ ಅನುಶ್ರೀ ನಿರೂಪಕಿ ಆಗಿ ಹೆಚ್ಚು ಫೇಮಸ್ ಆದವರು. ಇವರ ನಿರೂಪಣೆಗೆ ಜನರು ಮನಸೋತಿದ್ದರು. ಇದೀಗ ಇವರು ತಾವು ಮದುವೆ ಆಗಲು ಮನಸ್ಸು ಮಾಡಿರುವುದಾಗಿ ಸ್ವತಃ ಅವರೇ ಒಂದು ಟಿವಿ ಷೂ ಒಂದರಲ್ಲಿ ಬಹಿರಂಗವಾಗಿ ತಿಳಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ನಡೆಯುತ್ತಿದ್ದ ರಿಯಾಲಿಟಿ ಷೋ ಗಮನಿಸಿದ ಅನುಶ್ರೀ, ಇದರಲ್ಲಿ ಭಾಗವಹಿಸಿದ ಜೋಡಿಗಳ ಪ್ರೀತಿ ಮತ್ತು ಭಾಂಧವ್ಯವನ್ನು ನೋಡಿದರೆ ನನಗು ಮದುವೆಯಾಗಲು ಆಸೆಯಾಗುತ್ತಿದೆ ಎಂದು ಹೇಳಿದ್ದಾರೆ. ಇವರ ಈ ಮಾತನ್ನು ಕೇಳಿರುವ ಅನುಶ್ರೀ ಅಭಿಮಾನಿಗಳಿಗೆ ಬಹಳಷ್ಟು ಖುಷಿ ಯಾಗಿದೆ.
ಕೊನೆಗೂ ತಾವು ಮದುವೆ ಆಗಲು ಇಚ್ಚಿಸಿರುವ ಬಗ್ಗೆ ಮಾತನಾಡಿದ ಅನುಶ್ರೀ ಗೆ ಈಗಾಗಲೇ ಹುಡುಗ ಸಿಕ್ಕಿದ್ದಾನ? ಆ ಹುಡುಗ ಯಾರಿರಬಹುದು? ಅಥವಾ ಅನುಶ್ರೀ ಸುಮ್ಮನೆ ಹೀಗೆ ಹೇಳಿದ್ರಾ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಅಭಿಮಾನಿಗಳ ಮನಸ್ಸನ್ನು ಕಡಿಸುತ್ತಿದೆ. ಇದಕ್ಕೆಲ್ಲ ಉತ್ತರ ನಮ್ಮ ಅನುಶ್ರೀ ಅವರೇ ಕೊಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
