fbpx
ಸಮಾಚಾರ

ಶಿವಣ್ಣನಿಗಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾದ ಹೊಂಬಾಳೆ ಫಿಲ್ಮ್ಸ್! ನಿರ್ದೇಶಕರು ಯಾರು ಗೊತ್ತಾ?

ಕೆಜಿಎಫ್, ಸಲಾರ್ ನಂತಹ ಅದ್ಭುತ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ಹೊಂಬಾಳೆ ಫಿಲ್ಮ್ಸ್ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗಾಗಿ ಸಿನಿಮಾವೊಂದನ್ನು ಮಾಡಲು ಪ್ಲಾನ್ ಮಾಡಿದ್ದಾರೆ.

ಕೆಜಿಎಫ್ ಚಿತ್ರದ ಸಕ್ಸಸ್ ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಎದುರು ಇದೀಗ ಹತ್ತು ಹಲವಾರು ಸಿನಿಮಾಗಳಿವೆ. ಇವೆಲ್ಲ ಸಿನಿಮಾಗಳ ಮಧ್ಯೆ ಇದೀಗ ಶಿವಣ್ಣ ಅವರಿಗೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಹೊಂಬಾಳೆ ಫಿಲ್ಮ್ ಸಂಸ್ಥೆ ಮತ್ತು ರಾಜ್ ಕುಮಾರ್ ಕುಟುಂಬದವರಿಗೆ ಒಂತರ ನಂಟು ಇದೆ ಎಂದು ಹೇಳಬಹುದು. ಏಕೆಂದರೆ ಪುನೀತ್ ರಾಜ್ ಕುಮಾರ್ ನಟನೆಯ ನಿನ್ನಿಂದಲೇ ಸಿನಿಮಾದ ಮೂಲಕ ಕನ್ನಡ ಫಿಲ್ಮ್ ಇಂಡಸ್ಟ್ರಿ ಗೆ ಕಾಲಿಟ್ಟ ಹೊಂಬಾಳೆ ಫಿಲ್ಮ್ ಸಂಸ್ಥೆ ಅನಂತರ ರಾಜಕುಮಾರ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದಾದ ಬಳಿಕ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್ ಅವರನ್ನು ಸಹ ಇದೇ ಹೊಂಬಾಳೆ ಫಿಲ್ಮ್ ಸಂಸ್ಥೆ ತಮ್ಮ ಬ್ಯಾನರ್ ನಲ್ಲಿ ಇವರನ್ನು ಪರಿಚಯಿಸಿದರು. ಇದೀಗ ಶಿವಣ್ಣ ಅವರಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಹೊಂಬಾಳೆ ಫಿಲ್ಮ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಗಾಂಧಿನಗರದ ಮಂದಿಯ ಪ್ರಕಾರ ಈ ಸಿನಿಮಾವನ್ನು ರತ್ನನ್ ಪ್ರಪಂಚ ಸಿನಿಮಾ ಮಾಡಿದ ಪ್ರದೀಪ್ ಪದಕಿ ಅವರೇ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಶಿವಣ್ಣ ವೇದ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇವೆಲ್ಲ ಸಿನಿಮಾದ ಬಳಿಕ ಮುಂದಿನ ಸಿನಿಮಾದ ಬಗ್ಗೆ ಯೋಚಿಸುತ್ತಾರೆ ಎಂಬುದು ಸದ್ಯಕ್ಕೆ ಇರುವ ಮಾಹಿತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top