fbpx
ಸಮಾಚಾರ

ಅಮ್ಮ ಅಂತ ಎಷ್ಟು ಸಲ ಹೇಳಿಕೊಟ್ಟರೂ ಕೊನೆಗೆ ಆರ್ಯನ್ ಹೇಳಿದ್ದು ಮಾತ್ರ ಅಪ್ಪ ಅಂತ! ಆರ್ಯನ್ ಮುದ್ದಾದ ವಿಡಿಯೋ ಸಕತ್ ವೈರಲ್

ನಟಿ ಮೇಘನಾ ರಾಜ್ ಅವರು ಚಿರುವಿನ ಅಕಾಲಿಕ ಮರಣದಿಂದ ಬಹಳಷ್ಟು ಸೊರಗೋಗಿದ್ದರು. ಇವರ ದುಃಖವನ್ನು ಕಡಿಮೆಗೊಳಿಸಿದ್ದು ಇವರ ಮುದ್ದಾದ ಮಗ ರಯಾನ್ ರಾಜ್. ಮೇಘನಾ ಅವರಿಗೆ ತಮ್ಮ ಮಗನ ಮೇಲೆ ತುಂಬಾ ಪ್ರೀತಿ. ಬಿಡುವಿನ ಸಮಯದಲ್ಲಿ ತಮ್ಮ ಮಗನ ಜೊತೆ ಕಳ್ಳ ಕಳೆಯುತ್ತಾರೆ. ಇದೇ ಸಮಯದಲ್ಲಿ ಮೇಘನಾ ತಮ್ಮ ಮುದ್ದು ಮಗನ ಜೊತೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಮೇಘನಾ ಅವರು ಇದೀಗ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಪತಿಯ ಅಗಲಿಕೆಯ ನೋವಿನಿಂದ ಹೊರಬಂದು ಮೇಘನಾ ಇದೀಗ ಸಿನಿಮಾದತ್ತ ಮುಖ ಮಾಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮಗನ ಜೊತೆ ತೆಗೆದ ಒಂದು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೊದಲು ಮೇಘನಾ ರಾಜ್ ತಮ್ಮ ಮಗನಿಗೆ ಅಮ್ಮ ಅಮ್ಮ ಎಂದು ಹೇಳಿಕೊಡುತ್ತಾರೆ. ಅದರಂತೆ ಆರ್ಯನ್ ಕೂಡ ಅಮ್ಮ ಎಂದು ಹೇಳುತ್ತಾನೆ. ಆದರೆ ಕೊನೆಯಲ್ಲಿ ಅಮ್ಮ ಎಂದು ಹೇಳಿದರೆ ಆರ್ಯನ್ ಅದಕ್ಕೆ ಅಪ್ಪ ಎಂದು ಉತ್ತರಿಸುತ್ತಾನೆ.

ಈ ವಿಡಿಯೋವನ್ನು ಗಮನಿಸಿದ ಅಭಿಮಾನಿಗಳು ಬಹಳಷ್ಟು ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಆರ್ಯನ್ ಅವರಿಗೆ ತಮ್ಮ ತಂದೆಯ ಮೇಲೆ ಎಷ್ಟು ಪ್ರೀತಿ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top