fbpx
ಸಮಾಚಾರ

‘ದೊರೆ’ ಆಗಬೇಕಿತ್ತು ಪುನೀತ್: ಅಪ್ಪು ಜೊತೆಗೆ ಮಾಡಬೇಕಿದ್ದ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಹೇಳಿದ್ದಿಷ್ಟು

ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಸುಮಾರು ಆರೇಳು ತಿಂಗಳು ಕಳೆದಿವೆ. ಪುನೀತ್ ಅಗಲಿಕೆಯ ನೋವನ್ನು ಭರಿಸಲು ಕನ್ನಡಿಗರಿಗೆ ಈಗಲೂ ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತ ಮತ್ತು ಹೃದಯ ಸ್ತಂಭನದಿಂದ ವಿಧಿವಶರಾಗಿದ್ದರು. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಪುನೀತ್ 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿಬಿಟ್ಟರು. ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದಿಂದ ಇಡೀ ಕನ್ನಡಿಗರಿಗೆ ದಿಗ್ಭ್ರಮೆಯಾಗಿತ್ತು.

ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಅವರ ಸಿನಿಮಾಗಳು ಅರ್ಧಕ್ಕೆ ನಿಂತು ಹೋಗಿದೆ. ‘ಜೇಮ್ಸ್’ ಚಿತ್ರದ ಹಾಡುಗಳ ಚಿತ್ರೀಕರಣ ಬಾಕಿ ಇತ್ತು. ‘ದ್ವಿತ್ವ’ ಸಿನಿಮಾ ಸೆಟ್ಟೇರಬೇಕಿತ್ತು. ಸಂತೋಷ್ ಆನಂದ್‌ರಾಮ್ ಮತ್ತು ಕೃಷ್ಣ, ದಿನಕರ್ ನಿರ್ದೇಶನದ ಚಿತ್ರಗಳಲ್ಲಿ ಅಪ್ಪು ನಟಿಸಬೇಕಿತ್ತು. ಇವುಗಳ ಜೊತೆಗೆ ಉಮಾಪತಿ ನಿರ್ಮಾಣದ ಚಿತ್ರದಲ್ಲೂ ಅಪ್ಪು ನಟಿಸಬೇಕಿತ್ತು. ಇದೆಲ್ಲ ಆಗುವ ಮುನ್ನವೇ ಪುನೀತ್ ರಾಜ್‌ಕುಮಾರ್ ಅವರು ವಿಧಿಯಾಟಕ್ಕೆ ಸಿಲುಕಿ ಮರೆಯಾದರು. ಹೀಗಾಗಿ, ಅಪ್ಪುಗಾಗಿ ರೆಡಿ ಮಾಡಿದ್ದ ಚಿತ್ರಕಥೆಗಳು ಇದೀಗ ಹೀರೋ ಇಲ್ಲದೆ ಅನಾಥವಾಗಿದೆ.ಈ ಮದ್ಯೆ ಅಪ್ಪು ಜೊತೆ ಮಾಡಬೇಕಿದ್ದ ಸಿನಿಮಾವೊಂದರ ಬಗ್ಗೆ ನಿರ್ಮಾಪಕ ಉಮಾಪತಿ ಮಾತನಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ನಮ್ಮೆಲ್ಲರ ಪಾಲಿಗೆ ದೊರೆ ಇದ್ದಹಾಗೆ ಇದ್ದವರು. ಹಾಗಾಗಿ ಒಂದೊಳ್ಳೆ ಕಥೆ ಮಾಡಿಸಿ, ದೊರೆ ಹೆಸರಿನಲ್ಲೇ ಸಿನಿಮಾ ಮಾಡಬೇಕು ಎನ್ನುವ ಆಸೆ ನನಗಿತ್ತು. ಆದರೆ, ಅದು ಈಡೇರಲಿಲ್ಲ. ಪುನೀತ್ ನಂತರ ಈ ಟೈಟಲ್ ನಲ್ಲಿ ಯಾರಿಗೆ ಸಿನಿಮಾ ಮಾಡಬೇಕು ಎಂದು ಯೋಚಿಸಿದಾಗ, ತಕ್ಷಣವೇ ನೆನಪಾದವರು ಮತ್ತದೇ ಶಿವರಾಜ್ ಕುಮಾರ್ ಅವರು. ಅವರದ್ದೇ ಸಿನಿಮಾದ ಟೈಟಲ್ ಅದು. ಅವರು ಒಪ್ಪಿದರೆ, ಅವರಿಗಾಗಿ ಸಿನಿಮಾ ಮಾಡುವೆ ಎಂದಿದ್ದಾರೆ ಉಮಾಪತಿ.

ಅಂದಹಾಗೆ ದೊರೆ’ ಹೆಸರಿನಲ್ಲಿಯೇ ಬಹಳ ಹಿಂದೆಯೇ ಶಿವಣ್ಣ ಅವರು ಸಿನಿಮಾ ಮಾಡಿದ್ದರು. ಶಿವರಾಜ್‌ಕುಮಾರ್, ಹೇಮ ಪಂಚಮುಖಿ, ಭಾರತಿ ವಿಷ್ಣುವರ್ಧನ್ ನಟಿಸಿದ್ದ ಈ ಸಿನಿಮಾವನ್ನು ಶಿವಮಣಿ ನಿರ್ದೇಶಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top