fbpx
ಸಮಾಚಾರ

ಅಮ್ಮನಿಗೆ ವಿಶೇಷ ಧನ್ಯವಾದ ಹೇಳಿದ ನಟಿ ಪ್ರಣಿತಾ: ಏಕೆ ಗೊತ್ತಾ?

ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ನಮಗೆಲ್ಲರಿಗೂ ಗೊತ್ತು. ಇತ್ತೀಚಿಗೆ ತಮ್ಮ ಮಗುವಿನ ಮುಖ ಕೂಡ ರಿವೀಲ್ ಮಾಡಿದರು. ಇವೆಲ್ಲದರ ನಡುವೆ ಇದೀಗ ಮತ್ತೊಂದು ಇಂಟರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ನಟಿ ಪ್ರಣಿತಾ ಅವರಿಗೆ ಹೆರಿಗೆ ಮಾಡಿಸಿದ್ದು ಅವರ ಅಮ್ಮ ಡಾ.ಜಯಶ್ರೀ ಎಂಬುವುದು ಒಂದು ಅಚ್ಚರಿಯ ಸಂಗತಿ. ವೃತಿಯಲ್ಲಿ ಇವರು ಗೈನಕಲಾಜಿಸ್ಟ್. ಹೀಗಾಗಿ ತಮ್ಮ ಮಗಳ ಹೆರಿಗೆಯ ಜವಬ್ದಾರಿಯನ್ನು ಸ್ವತಃ ಅವರೇ ವಹಿಸಿಕೊಂಡಿದ್ದರು. ಇದರ ಕುರಿತು ಪ್ರಣಿತಾ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದು, ತಮ್ಮ ತಾಯಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

 

 

ಯಾವುದೇ ಹುಡುಗಿ ಕೇಳಬಹುದಾದ ಉತ್ತಮ ವಿಚಾರ ಅಂದ್ರೆ ಗೈನಕಲಾಜಿಸ್ಟ್ ಆಗಿರುವ ತಾಯಿ, ತನ್ನ ಮಗಳಿಗೆ ಹೆರಿಗೆ ಮಾಡಿಸುವುದು ಅತ್ಯಂತ ಸವಾಲಿನ ಸಂಗತಿ. ಭಾವನಾತ್ಮಕವಾಗಿ ಇದು ಕಠಿಣವಾದ ವಿಚಾರ. ಹೆರಿಗೆಯಲ್ಲಿ ಆಗುವ ಏರುಪೇರಿನ ಬಗ್ಗೆ ಚೆನ್ನಾಗಿ ಅವರಿಗೆ ತಿಳಿದಿರುತ್ತದೆ ಎಂದು ನಟಿ ಪ್ರಣಿತಾ ಹೇಳಿಕೊಂಡಿದ್ದಾರೆ.

ತಾಯಿ ಹೆರಿಗೆ ಮಾಡಿಸಿದ ವಿಚಾರಕ್ಕೆ `ಮುನ್ನಾಭಾಯಿ ಎಂಬಿಬಿಎಸ್’ ಚಿತ್ರದ ದೃಶ್ಯವೊಂದನ್ನು ನೆನಪಿಸಿಕೊಂಡ ಇವರು ಚಿತ್ರದಲ್ಲಿ ಬೋಮನ್ ಇರಾನಿ ತನ್ನ ಮಗಳಿಗೆ ಆಪ್‌ರೇಷನ್ ಮಾಡಲು ಕೈ ನಡಗುತ್ತದೆ ಎಂದು ಹೇಳಿದ್ದಾರೆ. ಹೆರಿಗೆಯನ್ನು ಮತ್ತಷ್ಟು ನೆಮ್ಮದಿಯುತ ಅನುಭವ ಆಗಿಸಿದ್ದಕ್ಕೆ ಥ್ಯಾಂಕ್ಸ್ ಅಮ್ಮಾ ಎಂದಿದ್ದಾರೆ. ಅಮ್ಮ ಯಾಕೆ ಹೊತ್ತಲ್ಲದ ಹೊತ್ತಲ್ಲಿ ಆಸ್ಪತ್ರೆಗೆ ಹೋಗುತ್ತಿದ್ರು ಅಂತಾ ಈಗ ತಿಳಿಯಿತು ಎಂದು ತಾಯಿಯ ಕುರಿತು ಮೆಚ್ಚುಗೆ ಮಾತನ್ನು ಆಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top