fbpx
ಸಮಾಚಾರ

‘ಬ್ರಹ್ಮಾಸ್ತ್ರ’ ದೊಡ್ಡ ಯಡವಟ್ಟು: ಹಿಂದೂ ಧರ್ಮೀಯರ ಕೆಂಗಣ್ಣಿಗೆ ಗುರಿಯಾದ ರಣಬೀರ್ ಕಪೂರ್

ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರ ಚಿತ್ರದ ಟ್ರೈಲರ್ ನೆನ್ನೆಯಷ್ಟೇ ಬಿಡುಗಡೆಯಾಗಿದ್ದು ಎಲ್ಲೆಡೆ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿರುವ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಣಬೀರ್ ಕಪೂರ್-ಆಲಿಯಾ ಭಟ್ ನಾಯಕ-ನಾಯಕಿಯಾಗಿ ನಟಿಸಿರುವ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ನಟಿಸಿದ್ದಾರೆ.

 

 

ಇದೊಂದು ಫ್ಯಾಂಟಸಿ ಸಿನಿಮಾ. ಬೆಂಕಿಯ ಜೊತೆ ಶಿವ ಪಾತ್ರದಾರಿಗೆ ಒಂದು ವಿಶೇಷವಾದ ಕನೆಕ್ಷನ್​ ಇದೆ. ಆತನನ್ನು ಬೆಂಕಿ ಸುಡುವುದಿಲ್ಲ. ಹಾಗಾದರೆ ಅವನ ಹಿನ್ನೆಲೆ ಏನು? ಇಂಥ ಶಕ್ತಿ ಆತನಿಗೆ ಬಂದಿದ್ದು ಹೇಗೆ? ಅವನ ಹಿಂದೆ ದುಷ್ಟಶಕ್ತಿಗಳು ಯಾಕೆ ಬೆನ್ನುಬಿದ್ದಿವೆ ಎಂಬಿತ್ಯಾದಿ ಕೌತುಕದ ಪ್ರಶ್ನೆಗಳನ್ನು ಮೂಡಿಸುವಲ್ಲಿ ಈ ‘ಬ್ರಹ್ಮಾಸ್ತ್ರ’ ಟ್ರೇಲರ್​ ಯಶಸ್ವಿ ಆಗಿದೆ. ಆದರೆ, ಈ ಟ್ರೈಲರ್ ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಅನ್ನುವಂತಹ ದೃಶ್ಯವೊಂದು ಇದೆ ಎನ್ನುವ ಕಾರಣಕ್ಕಾಗಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

 

ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ರಣಬೀರ್ ಕಪೂರ್ ಸ್ಪೀಡ್ ಆಗಿ ಬಂದು ದೇವಸ್ಥಾನದ ಒಳಗೆ ನುಗ್ಗುತ್ತಾರೆ. ಅಲ್ಲಿರುವ ಘಂಟೆ ಬಾರಿಸುತ್ತಾರೆ. ಜಿಗಿದು ಗಂಟೆ ಬಾರಿಸುವಾಗ, ಅವರು ಧರಿಸಿರುವ ಶೂ ಕಾಣುತ್ತದೆ. ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದಾರೆ. ಶೂ ಇರುವಂತಹ ಕಾಲ್ ಗಳು ಫೋಟೋವನ್ನೂ ವೈರಲ್ ಕೂಡ ಮಾಡಿದ್ದಾರೆ. ದೇವರಿಗೆ ಅಪಮಾನ ಮಾಡಿದ್ದಕ್ಕೆ ಸಿನಿಮಾ ಸೋಲಲಿ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ.

 

ಇದೊಂದು ಭಾರತ ಪುರಾಣದ ಆಧಾರದಲ್ಲಿ ಮೂಡಿ ಬಂದಿರುವ ಸಿನಿಮಾವಾಗಿದ್ದರಿಂದ, ರಣಬೀರ್ ತುಂಬಾ ಮುತುವರ್ಜಿ ತಗೆದುಕೊಂಡು ನಟಿಸಬೇಕಿತ್ತು. ಈ ದೃಶ್ಯವನ್ನು ಅವರ ಅಭಿಮಾನಿಗಳು ಕೂಡ ಇಷ್ಟ ಪಡಲಾರರು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top