fbpx
ಸಮಾಚಾರ

ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ರಿಲೀಸ್‌ಗೆ ಮುಹೂರ್ತ ಫಿಕ್ಸ್!

“ಚಾಲೆಂಜಿಂಗ್ ಸ್ಟಾರ್”, “ಡಿಬಾಸ್” ದರ್ಶನ್ ಅವರ ಫ್ಯಾನ್ ಕ್ರೇಜ್ ಯಾವಾಗಲು ಒಂದು ಲೆವೆಲ್ ಜಾಸ್ತಿನೇ ಇರುತ್ತೆ. ಇವರ ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಆದರೆ ರಾಬರ್ಟ್ ಸಿನಿಮಾದ ನಂತರ ದರ್ಶನ್ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಇದೀಗ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಇದ್ದು ಅದೇನೆಂದರೆ ದರ್ಶನ್ ಅವರ ಮುಂದಿನ ಸಿನಿಮಾ ಕ್ರಾಂತಿ ಬಿಡುಗಡೆಯ ದಿನ ಫಿಕ್ಸ್ ಅಗಿದ್ಯಂತೆ.

ರಾಬರ್ಟ್ ಸಿನಿಮಾದ ನಂತರ ಕೊರೊನ ಕಾಟದಿಂದಾಗಿ ದರ್ಶನ್ ಸಿನಿಮಾ ರಂಗದಿಂದ ಸ್ವಲ್ಪ ಬ್ರೆಕ್ ತೆಗೆದುಕೊಂಡಿದ್ದರು. ನಂತರ ಇವರು ಕ್ರಾಂತಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳಲಾಗಿತ್ತು. ಈಗಾಗಲೇ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಆಗಿ ಸಕತ್ ಸೌಂಡ್ ಮಾಡುತ್ತಿದೆ. ಇವೆಲ್ಲದರ ಮದ್ಯೆ ಕ್ರಾಂತಿ ಸಿನಿಮಾವನ್ನು ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆಯಂತೆ.

ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಕೆಲವೊಂದು ಸಣ್ಣ ಪುಟ್ಟ ಕೆಲಸಗಳು ಮಾತ್ರ ಬಾಕಿ ಇದೆ. ಈ ಸಿನಿಮಾದ ಪೋಸ್ಟರ್ ಪ್ರೊಡಕ್ಷನ್ ಕೂಡ ವೇಗದಿಂದ ಸಾಗುತ್ತಿದೆ. ಅಂದುಕೊಂಡಂತೆ ಎಲ್ಲಾ ನಡೆದರೆ ನವೆಂಬರ್ ತಿಂಗಳಲ್ಲಿ ಕ್ರಾಂತಿ ಸಿನಿಮಾದ ದರ್ಶನ ಆಗೋದು ಪಕ್ಕಾ ಎಂದೇ ಹೇಳಬಹುದು. ಇದರ ಕುರಿತು ಚಿತ್ರ ತಂಡ ಅಧಿಕೃತ ಮಾಹಿತಿ ನೀಡುವುದೊಂದೇ ಬಾಕಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top