fbpx
Sports

ಒಂದೇ ತಂಡದಲ್ಲಿ ಆಡಲಿದ್ದಾರೆ ಭಾರತ ಮತ್ತು ಪಾಕಿಸ್ಥಾನ್ ತಂಡದ ಆಟಗಾರರು!

ಭಾರತ ಮತ್ತು ಪಾಕಿಸ್ತಾನ್ ತಂಡಗಳ ನಡುವೆ ಪಂದ್ಯ ಎಂದರೆ ಪ್ರತಿಯೊಬ್ಬರಿಗೂ ಕುತೂಹಲ ಜಾಸ್ತಿ. ಇದು ಒಂತರ ಹೈ ವೋಲ್ಟೇಜ್ ಪಂದ್ಯ ಎಂದೇ ಕರೆಯಬಹುದು. ಆದರೆ ಉಭಯ ತಂಡದ ಆಟಗಾರರು ಒಂದೇ ತಂಡದಲ್ಲಿ ಆಡಲಿದ್ದಾರೆ ಎಂದು ಹೇಳಿದರೆ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು. ಆದರೆ ಇದು ಸಾಧ್ಯ.

ಮುಂದಿನ ವರ್ಷ ಆಫ್ರೋ ಏಷ್ಯಾ ಕಪ್ ಪ್ರಾರಂಭಿಸಲು ಚಿಂತನೆಗಳು ನಡೆಯುತ್ತಿವೆ ಅಂತೆ. ಒಂದು ವೇಳೆ ಇದು ಪ್ರಾರಂಭವಾದರೆ ಉಭಯ ದೇಶದ ಆಟಗಾರರು ಒಂದೇ ತಂಡದಲ್ಲಿ ಆಡುವುದು ಖಚಿತ. ಇಲ್ಲಿಯವರೆಗೂ ಉಭಯ ತಂಡಗಳ ವಿರುದ್ಧ ನಡೆಯುವ ಪಂದ್ಯವನ್ನು ವೀಕ್ಷಿಸಲು ಬರುತ್ತಿದ್ದ ಆಟಗಾರರು ಇದೀಗ ಉಭಯ ತಂಡದ ಆಟಗಾರರು ಒಂದೇ ತಂಡದ ಪರ ಆಡುವುದನ್ನು ನೋಡಲು ಕಾತುರದಿಂದ ಮೈದಾನಕ್ಕೆ ಬರುತ್ತಾರೆ.

ಈ ಹಿಂದೆ ಆಫ್ರೋ ಏಷ್ಯಾ ಕಪ್ ಪಂದ್ಯಾವಳಿಯು 2005 ಮತ್ತು 2007 ರಲ್ಲಿ ಎರಡು ಬಾರಿ ನಡೆಯಿತು. ಇದಾದ ನಂತರ ಪ್ರಸಾರ ಮತ್ತು ರಾಜಕೀಯ ಸಮಸ್ಯೆಯಿಂದ ಇದನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ . ಮುಂದಿನ ತಿಂಗಳು ನಡೆಯಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಟೂರ್ನಿಯ ಕುರಿತು ಹೆಚ್ಚಿನ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ. ಈ ಆಟವು ಏಷ್ಯಾದಲ್ಲಿ ಎಷ್ಟು ಹರಡಿದೆಯೋ, ಅದೇ ರೀತಿಯಲ್ಲಿ ಈ ಆಟವು ಆಫ್ರಿಕನ್ ದೇಶಗಳಲ್ಲಿ ಹರಡಬೇಕು ಮತ್ತು ಅಲ್ಲಿ ಈ ಆಟವನ್ನು ತಳಮಟ್ಟದಲ್ಲಿ ಬಲಪಡಿಸಬೇಕೆಂದು ಜಯ್ ಶಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top