fbpx
ಸಮಾಚಾರ

ರಜಿನಿಕಾಂತ್-ಶಿವಣ್ಣ ಕಾಂಬೋ ಚಿತ್ರಕ್ಕೆ ಟೈಟಲ್ ಫಿಕ್ಸ್: ಫ್ಯಾನ್ಸ್ ಕ್ರೇಜ್​ ಹೆಚ್ಚಿಸಿದ ಪೋಸ್ಟರ್

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೊದಲ ಬಾರಿಗೆ ನಟಿಸುತ್ತಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ.. ಚಿತ್ರಕ್ಕೆ ‘ಜೈಲರ್’ ಅಂತ ಟೈಟಲ್ ಇಡಲಾಗಿದೆ. `ಜೈಲರ್’ ಚಿತ್ರದ ಮಾಸ್‌ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

ಇನ್ನು ರಕ್ತಸಿಕ್ತವಾಗಿರುವ ಮಚ್ಚು ನೇತಾಡುತ್ತಿರುವ ಲುಕ್ ರಿವೀಲ್ ಆಗಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಆಗಿದೆ. ಚಿತ್ರದ ರಗಡ್ ಪೋಸ್ಟರ್ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಕ್ಯೂರಿಯಾಸಿಟಿ ಬೀಲ್ಡ್ ಆಗಿದ್ದು, ಪೋಸ್ಟರ್ ಲುಕ್ ಏಲ್ಲೆಡೆ ವೈರಲ್ ಆಗಿದೆ.

 

 

ರಜನಿಕಾಂತ್​ ಜೊತೆ ಶಿವರಾಜ್​ಕುಮಾರ್​ ನಟಿಸುವ ಬಗ್ಗೆ ಹಲವು ದಿನಗಳ ಹಿಂದೆಯೇ ಸುದ್ದಿ ಕೇಳಿಬಂದಿತ್ತು. ಅದನ್ನು ಶಿವಣ್ಣ ಕೂಡ ಖಚಿತ ಪಡಿಸಿದ್ದಾಗಿದೆ. ‘ರಜನಿಕಾಂತ್ ಜತೆ ನಟಿಸುವುದು ನಿಜಕ್ಕೂ ಉತ್ತಮ ಅವಕಾಶ. ಈ ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ಇದೆ ಎಂದು ಶಿವರಾಜ್​ಕುಮಾರ್​ ಹೇಳಿದ್ದರು. ಶೀಘ್ರದಲ್ಲೇ ಈ ಸಿನಿಮಾಗೆ ಶೂಟಿಂಗ್​ ಆರಂಭ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top