fbpx
ಸಮಾಚಾರ

ನಟಿ ಸಾಯಿ ಪಲ್ಲವಿ ಅವರು ತುಂಡು ಬಟ್ಟೆ ಧರಿಸದೇ ಇರಲು ಮುಖ್ಯ ಕಾರಣ ಏನು ಗೊತ್ತಾ? ಇಲ್ಲಿದೆ ಅಸಲಿ ವಿಚಾರ

ದಕ್ಷಿಣದ ಖ್ಯಾತ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ತಮ್ಮ ಅಮೋಘವಾದ ನಟನೆ ಮತ್ತು ನೃತ್ಯದಿಂದ ಹಲವಾರು ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ. ಆದರೆ ನಾವು ಎಂದಿಗೂ ಸಾಯಿ ಪಲ್ಲವಿ ಅವರನ್ನು ತುಂಡು ಬಟ್ಟೆ ಧರಿಸಿರುವುದೇ ಆಗಲಿ ಅಥವಾ ಗ್ಲಾಮರಸ್ ಆಗಿ ಕಂಡಿಲ್ಲ. ಇದಕ್ಕೆ ಒಂದು ಮಖ್ಯವಾದ ಕಾರಣವಿದ್ದು, ಇದರ ಕುರಿತು ಸ್ವತಃ ಸಾಯಿ ಪಲ್ಲವಿ ಅವರೇ ಮಾತನಾಡಿದ್ದಾರೆ.

ಸಾಯಿ ಪಲ್ಲವಿ ಅವರಿಗೆ ತುಂಡು ಬಟ್ಟೆಗಳ ಮೇಲೆ ಯಾವುದೇ ರೀತಿಯ ದ್ವೇಷ ಏನು ಇಲ್ಲ. ಆದರೆ ಅವರು ಈ ರೀತಿ ಬಟ್ಟೆ ಹಾಕಿಕೊಳ್ಳಲು ಇಷ್ಟ ಪಡದೇ ಇರಲು ಕಾರಣ ಅವರದ್ದೇ ಆದ ಒಂದು ವಿಡಿಯೋ. ಈ ವಿಡಿಯೋ ಬಿಡುಗಡೆ ಅಡಗಿನಿಂದಲೂ ಇವರು ಎಂದಿಗೂ ಗ್ಲಾಮರಸ್ ಆಗಿ ಕಾಣುವುದಿಲ್ಲ ಎಂದು ನಿರ್ಧರಿಸಿದರಂತೆ.

ಸಂಧರ್ಶನವೊಂದರಲ್ಲಿ ಮಾತನಾಡಿದ ಸಾಯಿ ಪಲ್ಲವಿ ಅವರು “ನಾನು ಜಾರ್ಜಿಯಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದಾಗ ಅಲ್ಲಿ ಕಾಲೇಜು ವೇದಿಕೆಯಲ್ಲಿ ಟ್ಯಾಂಗೋ ಡ್ಯಾನ್ಸ್ ಮಾಡಿದ್ದೆ. ಟ್ಯಾಂಗೊ ಡ್ಯಾನ್ಸ್ ಮಾಡಲು ಅನುಕೂಲವಾಗುವಂತೆ ಅಲ್ಲಿನವರು ಚಿಕ್ಕ ಉಡುಪು ಧರಿಸುತ್ತಾರೆ. ನಾನೂ ಸಹ ಮನೆಯವರ ಅನುಮತಿ ಪಡೆದು ಗ್ಲಾಮರಸ್ ಉಡುಪು ಧರಿಸಿದ್ದೆ. ‘ಪ್ರೇಮಂ’ ಸಿನಿಮಾ ಬಿಡುಗಡೆ ಆದ ಬಳಿಕ ಆ ಡ್ಯಾನ್ಸ್ ವಿಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಯಿತು. ನನ್ನ ಡ್ಯಾನ್ಸ್‌ನ ವಿಡಿಯೋ ನೋಡಿದವರು ಅದನ್ನು ಡ್ಯಾನ್ಸ್ ರೀತಿ ನೋಡಲಿಲ್ಲ. ಅದರಲ್ಲಿ ಬೇರೆ ಏನೋ ನೋಡಿದರು, ಕೆಟ್ಟದಾಗಿ ಕಮೆಂಟ್ ಮಾಡಿದರು ಅದನ್ನು ಕಂಡು ನನಗೆ ನಾಚಿಕೆಯಾಯಿತು” ಎಂದು ಹೇಳಿದರು.

ಆ ಘಟನೆ ನಡೆದ ಬಳಿಕ ನನಗೆ ಸಣ್ಣ ಉಡುಗೆಗಳನ್ನಾಗಲಿ, ಗ್ಲಾಮರಸ್ ಉಡುಗೆಗಳನ್ನು ಧರಿಸಲು ಆಗಲೇ ಇಲ್ಲ. ಆ ರೀತಿಯ ಉಡುಗೆಗಳ ವಿರುದ್ಧ ಜಾಗೃತೆಯೊಂದು ತನ್ನಂತಾನೆ ನನ್ನ ಮನದಲ್ಲಿ ಮನೆ ಮಾಡಿಬಿಟ್ಟಿತು. ಈಗಲೂ ನಾನು ಸಾಮಾನ್ಯ ಉಡುಪು ಧರಿಸಿದರೂ ಅಪ್ರಯತ್ನ ಪೂರ್ವವಾಗಿ ನಾನು ಎಚ್ಚರವಾಗಿರುವಂತೆ ಆಗಿದೆ” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top