fbpx
ಸಮಾಚಾರ

ಹೆಬ್ಬುಲಿ ನಟಿ ಅಮಲರನ್ನು ಮಂಚಕ್ಕೆ ಕರೆದಿದ್ದ ವ್ಯಕ್ತಿಗೆ ಹೈಕೋರ್ಟ್ ಶಾಕ್

ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಚಿತ್ರದಲ್ಲಿ ನಟಿಸಿರುವ ಅಮಲಾ ಪೌಲ್, ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ಇದೀಗ ಮತ್ತೆ ಸುದ್ದಿಯಾಗಿದೆ. ಪ್ರಕರಣದಲ್ಲಿ ಆರೋಪಿಗಳಿಗೆ ಕೋರ್ಟ್ ಶಾಕ್ ಕೊಟ್ಟಿದ್ದು ಆರೋಪಿಗಳಿಗೆ ಹಿನ್ನಡೆಯುಂಟಾಗಿದೆ.

ಅದು 2018ನೇ ಇಸವಿ. ಈ ವೇಳೆಯಲ್ಲಿ ಅಮಲಾ ಪೌಲ್ ಅವರು ಮಲೇಶಿಯಾದಲ್ಲಿ ಚಿತ್ರೀಕರಣವಾಗುತ್ತಿದ್ದ ಡಾನ್ಸ್ ಶೋವನ್ನು ನಡೆಸಿಕೊಡಲು ಅವರು ಒಪ್ಪಿಕೊಂಡಿದ್ದರು. ಹೀಗಾಗಿ ಚೆನ್ನೈನಲ್ಲಿರುವ ಶ್ರೀಧರ್ ಎನ್ನುವವರ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಸ್ಟುಡಿಯೋದಲ್ಲಿ ರಿಹರ್ಸಲ್ ಮಾಡುತ್ತಿದ್ದರು. ರಿಹರ್ಸಲ್ ಮಾಡುವ ವೇಳೆ ಇವರಿಗೆ ಅಳಗೇಶನ್ ಎನ್ನುವವರು ಪರಿಚವಾದರು. ಈ ವೇಳೆಯಲ್ಲಿ ಮಲೇಶಿಯಾಗೆ ಹೋಗುವಾಗ ದಾರಿ ಮಧ್ಯ ಉದ್ಯಮಿಯೊಬ್ಬರ ಜೊತೆ ಡಿನ್ನರ್ ಪಾರ್ಟಿ ಮತ್ತು ಲೈಂಗಿಕ ಆಸೆ ತೀರಿಸುತ್ತೀರಾ ಎಂದು ಕೇಳಿದ್ದರಂತೆ.

ಅಮಲಾ ಪೌಲ್ ಅವರ ದೂರಿನಲ್ಲಿ ಹೆಸರಿಸಲಾದ ಇಬ್ಬರು ಉದ್ಯಮಿಗಳಾದ ಬಾಸ್ಕರನ್ ಮತ್ತು ಶ್ರೀಧರ್ ಅವರು ಬಾಕಿ ಉಳಿದಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ತಡೆಯಾಜ್ಞೆ ಕೋರಿ ಚೆನ್ನೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವಾದ್ದರಿಂದ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಆದರೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣವನ್ನು ವಜಾಗೊಳಿಸುವುದಿಲ್ಲ ಎಂದು ಹೇಳಿ ಇಬ್ಬರು ಉದ್ಯಮಿಗಳ ಅರ್ಜಿಯನ್ನು ವಜಾಗೊಳಿಸಿ ಶಾಕ್ ಕೊಟ್ಟಿದೆ.

ಅಮಲಾ ಪೌಲ್ ಅವರು 2018 ರಲ್ಲಿ ಮಲೇಷ್ಯಾದಲ್ಲಿ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಬೇಕಿತ್ತು ಮತ್ತು ಅವರು ಶ್ರೀಧರ್ ಒಡೆತನದ ಡ್ಯಾನ್ಸ್ ಸ್ಟುಡಿಯೋದಲ್ಲಿ ತಮ್ಮ ನೃತ್ಯದ ಹೆಜ್ಜೆಗಳನ್ನು ಅಭ್ಯಾಸ ಮಾಡುತ್ತಿದ್ದರು. ನಂತರ ಅಲಗೇಶನ್ ಅವರು ಮಲೇಷ್ಯಾಕ್ಕೆ ಹೋಗುವ ದಾರಿಯಲ್ಲಿ ಇಬ್ರಾಹಿಂ ಜೊತೆ ರಾತ್ರಿ ಊಟ ಮಾಡುವ ಬಗ್ಗೆ ಅಮಲಾ ಪೌಲ್ ಅವರನ್ನು ಸಂಪರ್ಕಿಸಿದರು. ನಂತರ ಅಮಲಾ ಪೌಲ್ ಇದು ಸೆಕ್ಸ್ ರಾಕೆಟ್ ತಂಡ ಎಂದು ಅರಿತುಕೊಂಡರು ಮತ್ತು ಶ್ರೀಧರ್, ಅಲಗೇಸನ್, ಬಾಸ್ಕರನ್ ಮತ್ತು ಇಬ್ರಾಹಿಂ ವಿರುದ್ಧ ಜನವರಿ 2018 ರಲ್ಲಿ ಟಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top