fbpx
ಸಮಾಚಾರ

ಅಗ್ನಿಪಥ್ ಯೋಜನೆ ವಿರೋಧಿಸಲು ಹೃತಿಕ್ ರೋಷನ್ ‘ಅಗ್ನಿಪಥ್’ ಚಿತ್ರದ ಮೇಲೆ ಮುಗಿಬಿದ್ದ ಪ್ರತಿಭಟನಾಕಾರರು

ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉದ್ಯೋಗಾಕಾಂಕ್ಷಿಗಳು ರೈಲುಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ದಾಳಿ ನಡೆಸುತ್ತಿದ್ದು ಇಡೀ ದೇಶಕ್ಕೆ ಈಗ ಅಗ್ನಿಪಥ್ ಭೀತಿ ಶುರುವಾಗಿದೆ. ನಾಲ್ಕು ವರ್ಷಗಳ ನಂತರ ಭವಿಷ್ಯ ಏನಾಗಬಹುದು? ಪಿಂಚಣಿಯೂ ಸಿಗುವುದಿಲ್ಲ. 10-12 ಲಕ್ಷ ರೂಪಾಯಿಯಲ್ಲಿ ಜೀವನ ಹೇಗೆ ಸಾಗುತ್ತದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.

 

 

ಈ ಮದ್ಯೆ ಉದ್ಯೋಕಾಂಕ್ಷಿಗಳ ಕೆಂಗಣ್ಣು ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ ಚಿತ್ರವೊಂದರ ಮೇಲೆ ಬಿದ್ದಿದೆ.. ವಿಚಿತ್ರ ಎನಿಸಿದರೂ ಇದು ಸತ್ಯ. ಹೌದು, ವರ್ಷಗಳ ಹಿಂದೆ ಹೃತಿಕ್ ರೋಷನ್ ಅವರು ‘ಅಗ್ನೀಪಥ್’ ಹೆಸರಿನ ಸಿನಿಮಾ ಮಾಡಿದ್ದರು. ಆ ಕಾಲಕ್ಕೆ ಸಿನಿಮಾ ಒಳ್ಳೆ ಕಲೆಕ್ಷನ್ ಸಹ ಮಾಡಿತ್ತು.. ಇದೀಗ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ವಿರುದ್ಧ ಭುಗಿಲೆದ್ದಿರುವ ಅಸಹನೆ ಆ ‘ಅಗ್ನಿಪಥ್’ ಸಿನಿಮಾ ಮೇಲೆ ಬಿದ್ದಿದೆ..

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟಿಸುತ್ತಿರುವ ಯುವಕರು ಪ್ರತಿಷ್ಠಿತ ಸಿನಿಮಾ ಜಾಲತಾಣ ‘IMDB’ ವೆಬ್ ಸೈಟ್ ನಲ್ಲಿ ‘ಅಗ್ನಿಪಥ್’ ಚಿತ್ರಕ್ಕೆ ಕಡಿಮೆ ರೇಟಿಂಗ್ ಕೊಡುತ್ತಿದ್ದಾರೆ.. ‘ಅಗ್ನಿಪಥ್’ ಸಿನಿಮಾವನ್ನೇ ಸೇನಾ ಯೋಜನೆ ಎಂದು ಅಂದುಕೊಂಡಿರುವ ಯುವಕರು ಯೋಜನೆಯವನ್ನು ವಿರೋಧಿಸಲು ಸಿನಿಮಾಗೆ ಕಡಿಮೆ ರೇಟಿಂಗ್ ಕೊಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top