fbpx
ಸಮಾಚಾರ

ವೈದ್ಯರ ಎಡವಟ್ಟು: ಹೇಗಿದ್ದ ನಟಿಯ ಮುಖ ಹೇಗಾಯ್ತು ನೋಡಿ

ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷದಿಂದ ಅದೆಷ್ಟೂ ಅನಾಹುತಗಳು ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದೀಗ ಮತ್ತೊಂದು ಪ್ರಕರಣ ನಡೆದಿದ್ದು, ದಂತ ವೈದ್ಯರ ಎಡವಟ್ಟಿನಿಂದ ನಟಿಯ ಮುಖ ಸಂಪೂರ್ಣ ಬದಲಾದ ಪ್ರಸಂಗ ನಡೆದಿದೆ.

ಜೆಪಿ ನಗರದ ಡೆಂಟಲ್ ಆಸ್ಪತ್ರೆಯಲ್ಲಿ ನಟಿ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ಹೋಗಿದ್ದಾಳೆ. ಈ ಸಂಧರ್ಭದಲ್ಲಿ ವೈದ್ಯರು ಮಾಡಿರುವ ಎಡವಟ್ಟಿನಿಂದ ಬೆಳಗಾಗುವಷ್ಟರಲ್ಲಿ ಆಕೆಯ ಮುಖ ಸಂಪೂರ್ಣವಾಗಿ ಬದಲಾಗಿದ್ದು, ಗುರುತೇ ಸಿಗದಂತೆ ಆಗಿದೆ.

ಜೆಪಿ ನಗರದ ಡೆಂಟಲ್ ಆಸ್ಪತ್ರೆಯಲ್ಲಿ ನಟಿ 28 ದಿನಗಳ ಹಿಂದೆ ಚಿಕಿತ್ಸೆ ಪಡೆದಿದ್ದಳು. ಆದರೆ ಚಿಕಿತ್ಸೆ ಪಡೆದ ಮರುದಿನ ಆಕೆಯ ಮುಖದಲ್ಲಿ ಸಂಪೂರ್ಣ ಬದಲಾವಣೆಗಳು ಆದವು. ಅವಳ ಮುಖದಲ್ಲಿ ಆದ ಬದಲಾವಣೆಯಿಂದ ಬೇಸರಗೊಂಡ ನಟಿ 28 ದಿನಗಳ ಕಾಲ ಅಳುತ್ತಾ ಮನೆಯಲ್ಲೇ ಕುಳಿತಿದ್ದಳು. ಇದರ ಕುರಿತು ತಜ್ಞ ವೈದ್ಯರ ಬಳಿ ವಿಚಾರಿಸಿದಾಗ ಆಸ್ಪತ್ರೆಯವರು ಮಾಡಿದ ಎಡವಟ್ಟು ಬಯಲಾಯಿತು.

ನಟಿಗೆ ಚಿಕಿತ್ಸೆ ವೇಳೆ ಅನಸ್ತೇಷಿಯಾ ಬದಲು ಬೇರೊಂದು ಇಂಜೆಕ್ಷನ್ ಕೊಟ್ಟಿರೋದು ಬೆಳಕಿಗೆ ಬಂದಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ನಟಿ ಆಸ್ಪತ್ರೆಯ ಆಡಳಿತ ಮಂಡಳಿಗೆ ಈ ಬಗ್ಗೆ ದೂರು ನೀಡಿದರು. ಆದರೆ ಇವರು ದೂರು ನೀಡಿದರು ಸಹ ಆಡಳಿತ ಮಂಡಳಿಯವರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ನಟಿ ಮತ್ತು ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top