fbpx
ಸಮಾಚಾರ

‘ವಿಕ್ರಾಂತ್ ರೋಣ’ ಟ್ರೈಲರ್ ರಿಲೀಸ್ ಗೆ ಮುಹೂರ್ತ ಫಿಕ್ಸ್: ಯಾವಾಗ ಗೊತ್ತಾ?

ನಟ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಆಗಿ ಸಕತ್ ಸೌಂಡ್ ಮಾಡಿತ್ತು. ಇದಾದ ನಂತರ ಚಿತ್ರ ತಂಡ ರಾ ರಾ ರಕ್ಕಮ್ಮ ಸಾಂಗ್ ಬಿಡುಗಡೆ ಮಾಡಿತ್ತು. ಈ ಸಾಂಗ್ ಕೂಡ ಸಕತ್ ಫೇಮಸ್ ಆಗಿತ್ತು. ಇದಾದ ನಂತರ ಸಿನಿಮಾ ತಂಡದಿಂದ ಮುಂದಿನ ಮಾಹಿತಿ ಏನಿರಬಹುದೆಂದು ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದರು. ಇದೀಗ ಇವರಿಗೆ ಉತ್ತರ ಸಿಕ್ಕಿದೆ.

ನಟ ಕಿಚ್ಚ ಸುದೀಪ್ ಹಾಗು ವಿಕ್ರಾಂತ್ ರೋಣ ತಂಡ ಎಲ್ಲೇ ಹೋದರು ಅವರಿಗೆ ಕೇಳುತ್ತಿದ್ದ ಮೊದಲ ಪ್ರಶ್ನೆ ಎಂದರೆ ಅದು ಸಿನಿಮಾ ಬಿಡಿಗಡೆ ಯಾವಾಗ ಅಂತ. ಇದು ಬಿಟ್ಟರೆ ಸಿನಿಮಾದ ಟ್ರೈಲರ್ ಯಾವಾಗ ಬಿಡುಗಡೆ ಮಾಡುತ್ತೀರಾ ಎಂದು. ಇದನ್ನೆಲ್ಲಾ ಅರಿತ ಚಿತ್ರ ತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿ ಒಂದನ್ನು ನೀಡಿದ್ದಾರೆ. ಅದೇನೆಂದರೆ ಜೂನ್ 23 ರಂದು ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆಮಾಡುವುದಾಗಿ ಚಿತ್ರ ತಂಡ ತಿಳಿಸಿದೆ.

ಈಗಾಗಲೇ ಟೀಸರ್ ಮತ್ತು ರಾ ರಾ ರಕ್ಕಮ್ಮ ಹಾಡಿನಿಂದ ಬಹಳಷ್ಟು ಕ್ರೇಜ್ ಹುಟ್ಟಿಸಿರುವ ಸಿನಿಮಾ ಟ್ರೈಲರ್ ಮೂಲಕ ಮತ್ತಷ್ಟು ಕ್ರೇಜ್ ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಮೊದಲ ಬಾರಿಗೆ ಸುದೀಪ್ ಫ್ಯಾಂಟಸಿ ಶೈಲಿಯಲ್ಲಿ ನಟಿಸುತ್ತಿದ್ದು, ಇದು ಒಂದು ಪಾನ್ ಇಂಡಿಯಾ ಸಿನಿಮಾ ಕೂಡ ಹೌದು. ಹೀಗಾಗಿ ಅಭಿಮಾನಿಗಳು ಸುದೀಪ್ ಅವರನ್ನು ಫ್ಯಾಂಟಸಿ ಶೈಲಿಯಲ್ಲಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top