fbpx
ಸಮಾಚಾರ

10 ರೂಪಾಯಿ ನಾಣ್ಯಗಳನ್ನು ಕೂಡಿಸುತ್ತಾ ಲಕ್ಷಾಂತರೂಪಾಯಿ ಬೆಲೆಬಾಳುವ ಕಾರನ್ನು ಖರೀದಿಸಿದ ವ್ಯಕ್ತಿ! ಹೇಗೆ ಗೊತ್ತಾ?

10 ರೂಪಾಯಿ ನಾಣ್ಯಗಳನ್ನು ಜನರು ಸ್ವೀಕರಿಸುತ್ತಿಲ್ಲ ಎಂಬ ಮಾತುಗಳನ್ನು ನಾವು ಹಲವು ಬಾರಿ ಕೇಳಿದ್ದೀವಿ. ಈ 10 ರೂಪಾಯಿ ನಾಣ್ಯಗಳು ಮಾನ್ಯತೆ ಹೊಂದಿದೆ ಎಂದು RBI ಸ್ಪಷ್ಟಪಡಿಸಿದರು ಕೂಡ ಜನರು ಅದನ್ನು ಸ್ವೀಕರಿಸಲು ಮುಂದಾಗುತ್ತಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ 10 ರೂಪಾಯಿ ನಾಣ್ಯಗಳಿಂದ ಒಂದು ಕಾರನ್ನು ಖರೀದಿಸಿದ್ದಾನೆ ಎಂದರೆ ನಂಬಲು ಅಸಾಧ್ಯ. ಆದರೆ ಇದು ಸತ್ಯ.

ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ತಮಿಳುನಾಡಿನ ನಿವಾಸಿಯಾಗಿರುವ ಆರೂರ್​​ ವೆಟ್ರಿವೇಲ್​​ ಅವರ ತಾಯಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರ ಅಂಗಡಿಗೆ ಬರುವ ಗ್ರಾಹಕರು ಇವರಿಗೆ 10 ರೂಪಾಯಿ ನಾಣ್ಯಗಳನ್ನು ನೀಡಿ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಅದೇ ನಾಣ್ಯವನ್ನು ಬೇರೊಬ್ಬ ಗ್ರಾಹಕರಿಗೆ ನೀಡಲು ಹೋದರೆ ಅವರು ಅದನ್ನು ತೆಗೆದುಕೊಳ್ಳುವುದಿಲ್ಲ. ಹೀಗಾಗಿ ನಾಣ್ಯಗಳು ಮನೆಯಲ್ಲಿ ಸಂಗ್ರಹವಾಗುತ್ತಾ ಬಂತು. ಎಷ್ಟರಮಟ್ಟಿಗೆ ಎಂದರೆ ಮಕ್ಕಳು ಈ ನಾಣ್ಯಗಳಲ್ಲಿ ಆಟವಾಡಲು ಶುರುಮಾಡಿದರು. ಹೀಗಾಗಿ ಆರೂರ್​​ ವೆಟ್ರಿವೇಲ್​​ ಈ ನಾಣ್ಯಗಳಿಂದ ಏನಾದರು ಖರೀದಿಸಬೇಕೆಂದು ಮುಂದಾದರು.

ತಮ್ಮ ಬಳಿ ಇರುವ ನಾಣ್ಯಗಳನ್ನು ಕುಡಿಸುತ್ತಾ ಬಂದಾಗ ಇವರಿಗೆ ಒಟ್ಟು 6 ಲಕ್ಷ ರೂಪಾಯಿಗಳು ಆದವು. ತಾವು ಸಂಗ್ರಹಿಸಿದ್ದ 6 ಲಕ್ಷ ರೂಪಾಯಿಗಳಿಂದ ಒಂದು ಕಾರನ್ನು ಖರೀದಿಸಲು ಮುಂದಾದರು. ಹೀಗಾಗಿ ಕಾರು ಖರೀದಿಸಲು ಇವರು ಷೋರೂಮ್ ಗೆ ತೆರಳಿದರು. ಮೊದಲು ಅಲ್ಲಿನ ಮಾಲೀಕರು ಇವರಿಗೆ ಕಾರನ್ನು ನೀಡಲು ನಿರಾಕರಿಸಿದರು. ನಂತರ ಅವರು ಒಪ್ಪಿಕೊಂಡು ಆರೂರ್​​ ವೆಟ್ರಿವೇಲ್​​ ಅವರಿಗೆ ಕಾರನ್ನು ನೀಡಿದರು.

ಈ ಘಟನೆಯ ಕುರಿತು ಖಾಸಗಿ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಆರೂರ್​​ ವೆಟ್ರಿವೇಲ್ “ನನ್ನ ತಾಯಿ ಅಂಗಡಿಯನ್ನು ನಡೆಸುತ್ತಿದ್ದು ಗ್ರಾಹಕರು ನಾಣ್ಯಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಹೀಗಾಗಿ ಮನೆಯಲ್ಲಿ ನಾಣ್ಯಗಳ ರಾಶಿ ಇತ್ತು. ನಾಣ್ಯಗಳನ್ನು ಬ್ಯಾಂಕ್‌ಗಳಲ್ಲಿಯೂ ಸ್ವೀಕರಿಸಲಿಲ್ಲ. ನಾಣ್ಯಗಳು ನಿಷ್ಪ್ರಯೋಜಕ ಎಂದು ಆರ್‌ಬಿಐ ಹೇಳದಿರುವಾಗ, ಬ್ಯಾಂಕ್‌ಗಳು ಏಕೆ ಅವುಗಳನ್ನು ಸ್ವೀಕರಿಸುತ್ತಿಲ್ಲ? ನಾವು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ”ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top