fbpx
ಸಮಾಚಾರ

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಪಾಲ್ ಹ್ಯಾಗಿಸ್ ಅರೆಸ್ಟ್! ಯಾಕೆ ಗೊತ್ತಾ?

ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಪಾಲ್ ಹ್ಯಾಗಿಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಇಟಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

69 ವರ್ಷದ ಪಾಲ್ ಹ್ಯಾಗಿಸ್ ಓಸ್ಟುನಿಯಲ್ಲಿ ಮಂಗಳವಾರ ಪ್ರಾರಂಭವಾಗುವ ಚಲನಚಿತ್ರೋತ್ಸವಕ್ಕಾಗಿ ಇಟಲಿಯಲ್ಲಿದ್ದಾರೆ. ಇದೇ ಸಂಧರ್ಭದಲ್ಲಿ ವಿದೇಶಿ ಮಹಿಳೆಯೊಬ್ಬಳು ಎರಡು ದಿನಗಳಿಂದ ತನಗೆ ಹ್ಯಾಗಿಸ್ ಅವರು ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಆದರೆ ಹ್ಯಾಗಿಸ್ ಅವರ ಮೇಲೆ ದೂರು ಕೊಟ್ಟ ಮಹಿಳೆ ತನ್ನ ರಾಷ್ಟ್ರೀಯತೆ ಮತ್ತು ವಯಸ್ಸನ್ನು ಉಲ್ಲೇಖಿಸಿಲ್ಲ.

ಮಹಿಳೆ ದೂರಿನ ಆಧಾರದ ಮೇಲೆ ಇಟಲಿ ಪೊಲೀಸರು ಹ್ಯಾಗಿಸ್ ಅವರನ್ನುಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೃಂಡಿಸಿ ಪ್ರಾಸಿಕ್ಯೂಟರ್‌ ಕಚೇರಿ ಭಾನುವಾರ ಮುಚ್ಚಲಾಗಿತ್ತು. ಈ ಹಿನ್ನೆಲೆ ಹ್ಯಾಗಿಸ್ ಅವರನ್ನು ಇಂದು ಕಛೇರಿಗೆ ಕರೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಹ್ಯಾಗಿಸ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ತಾನು ನಿರಾಪರಾಧಿ, ಸಾಧ್ಯವಾದಷ್ಟು ಬೇಗ ವಿಚಾರಣೆ ಮಾಡಿ ಎಂದು ನಿರ್ದೇಶಕ ಹ್ಯಾಗಿಸ್ ಕೇಳಿಕೊಂಡಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top