fbpx
ಸಮಾಚಾರ

ಮುಸ್ಲಿಂ ಹುಡಿಗಿಯರು 16 ನೇ ವಯಸ್ಸಿನಲ್ಲೇ ಮದುವೆಯಾಗಬಹುದು ಎಂಬ ಆದೇಶವನ್ನು ಹೊರಡಿಸಿದ ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್!

ಪ್ರತಿಯೊಬ್ಬ ಹುಡುಗಿಗೆ 18 ವಯಸ್ಸು ತುಂಬಿದ ನಂತರ ಮತ್ತು ಪ್ರತಿಯೊಬ್ಬ ಹುಡುಗನಿಗೆ 21 ವಯಸ್ಸು ತುಂಬಿದ ನಂತರ ಮದುವೆಯಾಗಬೇಕು ಎಂಬುದು ಕಾನೂನು. ಆದರೆ ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ 16 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿಯರು ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಳ್ಳಬಹುದು ಎಂದು ತೀರ್ಪನ್ನು ಹೊರಡಿಸಿದೆ.

ಪಠಾಣ್‍ಕೋಟ್ ಮೂಲದ ಮುಸ್ಲಿಂ ದಂಪತಿಯು ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಇವರ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಏಕ ಸದಸ್ಯ ಪೀಠ ಇದೀಗ ಈ ಆದೇಶವನ್ನು ಹೊರಡಿಸಿದೆ.

ಅರ್ಜಿದಾರರು ಕುಟುಂಬದ ಇಚ್ಚೆಗೆ ಮೀರಿ ಮದುವೆ ಆದರೂ ಎಂಬ ಒಂದೇ ಒಂದು ಕಾರಣಕ್ಕೆ ಅವರು ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ. ದಂಪತಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಎಸ್‍ಎಸ್‍ಪಿ ಪಠಾಣ್‍ಕೋಟ್‍ಗೆ ಕೋರ್ಟ್ ನಿರ್ದೇಶನ ನೀಡಿದೆ.

ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರ ‘ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ’ ಪುಸ್ತಕದ ಆರ್ಟಿಕಲ್ 195 ರ ಪ್ರಕಾರ, ಹುಡುಗಿ 16 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದು, ಹುಡುಗನಿಗೆ 21 ವರ್ಷ ಮೀರಿದರೆ ಇವರಿಬ್ಬರು ಮದುವೆಯಾಗಬಹುದು. ಈ ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಕಾನೂನುಗಳ ಪ್ರಕಾರ ಪ್ರಾಪ್ತರಾದ ಕಾರಣ ಮದುವೆ ಕಾನೂನುಬದ್ಧವಾಗಿದೆ ಎಂದು ಉಲ್ಲೇಖಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top