fbpx
ಸಮಾಚಾರ

100 ಮೀಟರ್ ಓಟದಲ್ಲಿ ಧಾಖಲೆ ಬರೆದ 105 ವರ್ಷದ ಮಹಿಳೆ!

ನಾವು ಏನಾದರು ಸಾಧನೆ ಮಾಡಬೇಕಾದರೆ ನಮಗೆ ಮುಖ್ಯವಾಗಿ ಬೇಕಾಗಿರೋದು ಛಲ. ನಮ್ಮ ಸಾಧನೆಗೆ ವಯಸ್ಸಿನ ಅಂತರವಿಲ್ಲ ಎಂಬುದು ಎಷ್ಟು ಸತ್ಯ ಅಲ್ವಾ. ಇದಕ್ಕೆ ಪೂರಕವಾಗಿ 105 ವರ್ಷದ ಅಜ್ಜಿ 100 ಮೀಟರ್ ಓಟದಲ್ಲಿ ಭಾಗವಹಿಸಿದ್ದಲ್ಲದೆ ಒಂದು ಮಹತ್ವದ ಸಾಧನೆಯನ್ನು ಸಹ ಮಾಡಿದ್ದಾರೆ.

ಪ್ರತಿಯೊಬ್ಬರಿಗೂ ತಾವು ಜೀವನದಲ್ಲಿ ಏನಾದರು ಸಾಧನೆಯನ್ನು ಮಾಡಬೇಕೆಂಬ ಹುಮ್ಮಸ್ಸು ಇರುತ್ತದೆ. ಇದಕ್ಕೆ ಇವರಿಗೆ ವಯಸ್ಸಿನ ಅಂತರ ಬರುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಹರಿಯಾಣದ ರಾಂಬಾಯಿ ಎಂಬ 105 ವರ್ಷದ ಅಜ್ಜಿ ಭಾನುವಾರ ನಡೆದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕೇವಲ 45.40 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ಧಾಖಲೆಯನ್ನು ನಿರ್ಮಿಸಿದ್ದಾರೆ.

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದವರು ಗುಜರಾತಿನಲ್ಲಿ ಈ ಚಾಂಪಿಯನ್‌ಶಿಪ್‌ ಅನ್ನು ಆಯೋಜಿಸಿದರು. ಇದರಲ್ಲಿ ರಾಂಬಾಯಿ ಏಕಾಂಗಿಯಾಗಿ ಭಾಗವಹಿಸಿದರು. ಏಕೆಂದರೆ ಇವರಿಗೆ 100 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಕಾರಣ ಇವರಿಗೆ ಪ್ರತಿಸ್ಪರ್ದಿ ಯಾರು ಇರಲಿಲ್ಲ. ಇವರು ಕೇವಲ 45.40 ಸೆಕೆಂಡುಗಳಲ್ಲಿ 100 ಮೀಟರ್ ಓಡಿದರೆ 52.17 ಸೆಕೆಂಡುಗಳಲ್ಲಿ 200 ಮೀ. ಓಟವನ್ನು ಕೂಡ ಪೂರ್ಣಗೊಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top