fbpx
ಸಮಾಚಾರ

ಗುಜರಾತ್‌ನ ಏಕತಾ ಪ್ರತಿಮೆ ಬಳಿ ಭೂಕಂಪನ

ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಗುಜರಾತ್‍ನ ಸರ್ದಾರ್ ವಲ್ಲಬಾಯಿ ಪಟೇಲ್‍ರ ಏಕತಾ ಮೂರ್ತಿಯ ಬಳಿ ಭೂಕಂಪನ ಉಂಟಾದ ಘಟನೆ ನಡೆದಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದ ಬಳಿ 3.1 ತೀವ್ರತೆಯ ಕಂಪನ ದಾಖಲಾಗಿದೆ, ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ ಎಂದು ಅಧಿಕಾರಿಗಳು ಜೂನ್ 21 ರಂದು ತಿಳಿಸಿದ್ದಾರೆ.

ಪ್ರಬಲ ಭೂಕಂಪಗಳು ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾದ ಏಕತೆಯ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಮಾರಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಹುಲ್ ಪಟೇಲ್ ಹೇಳಿದ್ದಾರೆ. ಏಕತೆಯ ಪ್ರತಿಮೆ ಕಂಪನದ ಕೇಂದ್ರಬಿಂದು ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿಮೀ ದೂರದಲ್ಲಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ಹೇಳಿಕೆಯಲ್ಲಿ ತಿಳಿಸಿದೆ.

“ಸೋಮವಾರ ರಾತ್ರಿ 10.07 ಗಂಟೆಗೆ 3.1 ತೀವ್ರತೆಯ ಕಂಪನವು ದಾಖಲಾಗಿದ್ದು, ದಕ್ಷಿಣ ಗುಜರಾತ್‌ನ ಕೆವಾಡಿಯಾದ 12 ಕಿಮೀ ಪೂರ್ವ-ಆಗ್ನೇಯ (ಇಎಸ್‌ಇ) ಕೇಂದ್ರಬಿಂದುವಾಗಿದೆ. ಇದು 12.7 ಕಿ.ಮೀ ಆಳದಲ್ಲಿ ದಾಖಲಾಗಿದೆ” ಎಂದು ಐಎಸ್‌ಆರ್‌ ತಿಳಿಸಿದೆ. ಕಂಪನದಿಂದಾಗಿ ಈ ಪ್ರದೇಶದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top