fbpx
ಸಮಾಚಾರ

ಭಾರತ ತಂಡಕ್ಕೆ ಮತ್ತೊಂದು ದೊಡ್ಡ ಆಘಾತ! ಸ್ಟಾರ್ ಆಟಗಾರನಿಗೆ ಕೋವಿಡ್ ಪಾಸಿಟಿವ್!

ಇಂಗ್ಲೆಂಡ್ ಮತ್ತು ಭಾರತ ನಡುವಿನ ಅಂತಿಮ ಮತ್ತು ಐದನೇ ಟೆಸ್ಟ್ ಪಂದ್ಯಕ್ಕೆ COVID-19 ಭೀತಿ ಎದುರಾಗಿದೆ. ಈಗಾಗಲೇ ಇಂಗ್ಲೆಂಡ್ ಶಿಬಿರದಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಆರ್ ಅಶ್ವಿನ್ ಪಾಸಿಟಿವ್ ದೃಢಪಟ್ಟ ನಂತರ ಐಸೋಲೇಷನ್ ನಲ್ಲಿದ್ದಾರೆ. ಇದೀಗ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಅವರಿಗೂ ಕೋವಿಡ್ ಪಾಸಿಟಿವ್ ಎಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದೆ ವಿರಾಟ್ ತಮ್ಮ ಹೆಂಡತಿ ಅನುಷ್ಕಾ ಮತ್ತು ಮಗಳು ವಮಿಕ ಅವರ ಜೊತೆ ರಜೆಯ ಮೇರೆಗೆ ಮಾಲ್ಡೀವ್ಸ್ ಗೆ ತೆರಳಿದರು. ರಜೆಯ ಮೇರೆಗೆ ಮಾಲ್ಡೀವ್ಸ್ ಗೆ ಹೊರಟಿದ್ದ ವಿರಾಟ್ ರಜೆ ಮುಗಿಸಿ ಬಂದ ನಂತರ ಇವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಆದರೆ ಇವರು ಇದೀಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಸೋಂಕಿನ ಭೀತಿ ಹೆಚ್ಚಾಗುತ್ತಿರುವ ಕಾರಣ 24 ರಿಂದ ಲೀಸೆಸ್ಟರ್‌ಶೈರ್ ವಿರುದ್ಧ ಟೀಂ ಇಂಡಿಯಾದ ಅಭ್ಯಾಸ ಪಂದ್ಯವು ಯೋಜಿಸಿದಂತೆ ನಡೆಯದಿರಬಹುದು ಎಂದು ತೋರುತ್ತಿದೆ. ಕೋವಿಡ್ -19 ನಂತರ ಆಟಗಾರರಿಗೆ ಓವರ್‌ಲೋಡ್ ಕೆಲಸ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಇಲ್ಲದಿದ್ದರೆ ತಂಡದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಬಹುದು ಎಂದು ಹೇಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top