fbpx
ಸಮಾಚಾರ

ಪೌರ ಕಾರ್ಮಿಕರನ್ನು ತನ್ನ ಮನೆಗೆ ಆಹ್ವಾನಿಸಿದ ಕಿಚ್ಚ! ಕಾರಣವೇನು ಗೊತ್ತಾ?

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗಿರೋದು ನಮಗೆಲ್ಲಾ ಗೊತ್ತು. ಈ ಹಾಡಿಗೆ ಚಿಕ್ಕ ಮಕ್ಕಳಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳು ಸಹ ಹೆಜ್ಜೆ ಹಾಕುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಪೌರ ಕಾರ್ಮಿಕರು ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿರುವುದನ್ನು ನೋಡಿ ಕಿಚ್ಚ ಫುಲ್ ಫಿದಾ ಆಗಿ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಉಪಚರಿಸಿದ್ದಾರೆ.

ಧಾರವಾಡ ಪೌರ ಕಾರ್ಮಿಕರ ಗುಂಪೊಂದು ಕಿಚ್ಚ ಸುದೀಪ್ ಅಭಿನಯದ ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರಿಗೆ ಈ ಹಾಡಿಗೋಸ್ಕರ ಒಂದು ಭರ್ಜರಿ ಸೆಟ್ ಒಂದನ್ನು ನಿರ್ಮಿಸಿದ್ದು ಇದಕ್ಕೂ ಸುಮಾರು 30 ಸಾವಿರ ರೂ. ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೌರ ಕಾರ್ಮಿಕರ ವಿಡಿಯೋವನ್ನು ಗಮನಿಸಿದ ಕಿಚ್ಚ ಇವರನ್ನು ತಮ್ಮ ಮನೆಗೆ ಆಹ್ವಾನಿಸಿ ಅವರ ಜೊತೆ ಕಾಲ ಕಳೆದಿದ್ದಾರೆ.

ಸುದೀಪ್ ಅವರನ್ನು ಭೇಟಿ ಮಾಡಿ ಬಂದ ಪೌರ ಕಾರ್ಮಿಕರು ” ನಾವು ಕಿಚ್ಚನ ಅಭಿಮಾನಿಗಳು. ವಿಕ್ರಾಂತ್ ರೋಣ ಸಿನಿಮಾ ಯಶಸ್ಸಾಗಲು 30 ಸಾವಿರ ಖರ್ಚು ಮಾಡಿ ಸೆಟ್ ಒಂದನ್ನು ನಿರ್ಮಿಸಿ ಶೂಟ್ ಮಾಡಿದ್ದೆವು. ಇದನ್ನು ಗಮನಿಸಿದ ಸುದೀಪ್ ನಮ್ಮನ್ನು ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ. ಇದು ನಮ್ಮ ಜೀವನದ ಮರೆಯಲಾಗದ ಕ್ಷಣ. ಸ್ವತಃ ದೇವರನ್ನು ಭೇಟಿ ಮಾಡಿದಷ್ಟು ಖುಷಿ ನಮಗಾಗಿದೆ ಎಂದು ಅವರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top