fbpx
ಸಮಾಚಾರ

ಅದ್ದೂರಿಯಾಗಿ ನಡೆದ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದು ಗೌಡ ಪತ್ನಿಯ ಸೀಮಂತ ಶಾಸ್ತ್ರ!

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ ಚಂದು ಗೌಡ ಅವರ ಮನೆಯಲ್ಲಿ ಇದೀಗ ಸಂತಸ ತುಂಬಿದೆ. ಹೊಸ ಅತಿಥಿಯ ಆಗಮನಕ್ಕೆ ಕುಟುಂಬದವರು ಸಜ್ಜಾಗಿದ್ದಾರೆ. ಲಕ್ಷ್ಮಿ ಬಾರಮ್ಮ ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟ ಚಂದು ಗೌಡ ಮತ್ತು ಪತ್ನಿ ಶಾಲಿನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅಕ್ಟೋಬರ್ 29 2020 ರಲ್ಲಿ ಚಂದು ಗೌಡ ಮತ್ತು ಶಾಲಿನಿ ಅವರ ವಿವಾಹ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಇದೀಗ ಹೊಸ ಅತಿಥಿಯ ಆಗಮನಕ್ಕಾಗಿ ಕುಟುಂಬದವರು ಸಜ್ಜಾಗಿದ್ದಾರೆ. ಚಂದು ಗೌಡ ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು ಇವರ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ. ಇದೀಗ ಇವರ ಸೀಮಂತ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ನಟ ಚಂದು ಗೌಡ ಕಿರುತರೆ ಮಾತ್ರವಲ್ಲದೆ ಹಲವಾರು ಸಿನಿಮಾಗಳಲ್ಲೂ ಸಹ ನಟನೆಯನ್ನು ಮಾಡಿದ್ದಾರೆ. ಎಟಿಎಂ, ಕುಷ್ಕ, ಕೃಷ್ಣ ಗಾರ್ಮೆಟ್ಸ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಇವರು ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top