fbpx
ಸಮಾಚಾರ

ರ…ರ.. ರಕ್ಕಮ್ಮ ಹಾಡಿಗೆ ಒಟ್ಟಿಗೆ ಡ್ಯಾನ್ಸ್ ಮಾಡಿದ ಸ್ಯಾಂಡಲ್ವುಡ್ ಸ್ಟಾರ್ ಗಳು: ವಿಡಿಯೋ ನೋಡಿ

ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ರಾ.ರಾ. ರಕ್ಕಮ್ಮ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ., ಕೇವಲ ಸುದೀಪ್ ಅಭಿಮಾನಿಗಳು ಮಾತ್ರವಲ್ಲದೆ ಸಕಲ ಸಿನಿಪ್ರಿಯರು ಹಾಡಿಗೆ ಮನಸೋತಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್​ ಮಾಡುವುದು ಒಂದು ಟ್ರೆಂಡ್​ ಆಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳು ಕೂಡ ರೀಲ್ಸ್​ ಮಾಡುತ್ತಾರೆ.

‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ ಲಾಂಚ್ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ಅದಕ್ಕೂ ಮುನ್ನ ಇಂದು 3 ಡಿ ಟ್ರೈಲರ್ ಅನ್ನು ಚಿತ್ರರಂಗದ ಗಣ್ಯರು ಮತ್ತು ಮಾಧ್ಯಮದವರಿಗೆ ತೋರಿಸಲು ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಶಿವಣ್ಣ, ರವಿಚಂದ್ರನ್​, ರಕ್ಷಿತ್​ ಶೆಟ್ಟಿ , ರಿಷಭ ಶೆಟ್ಟಿ, ರಮೇಶ್, ಧನಂಜಯ್ ಸೇರಿದಂತೆ ಅತಿಥಿಗಳು 3D ಟ್ರೈಲರ್ ಲಾಂಚ್ ಮಾಡಿದರು..

 

 

ಈ ಕಾರ್ಯಕ್ರಮದಲ್ಲಿ ಜಾಕಲಿನ್​ ಫರ್ನಾಡಿಂಸ್​ ಕೂಡ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಎಲ್ಲ ನಟರನ್ನು ಕರೆಸಿ ಡ್ಯಾನ್ಸ್​ ಮಾಡಿಸಿದ್ದಾರೆ ಅಕುಲ್​. ಅದು ವಿಕ್ರಾಂತ್ ರೋಣ ಸಿನಿಮಾದ ಹಿಟ್​ ಸಾಂಗ್​ ರಾ ರಾ ರಕ್ಕಮ್ಮ ಎಲ್ಲರೂ ಹುಕ್​ ಅಪ್​ ಸ್ಟೆಪ್ಸ್​ ಮಾಡಿಸಿದ್ದಾರೆ. ವೇದಿಕೆ ಮೇಲೆ ಶಿವಣ್ಣ, ರವಿಚಂದ್ರನ್​, ರಕ್ಷಿತ್​ ಶೆಟ್ಟಿ , ರಿಷಭ ಶೆಟ್ಟಿ, ಕಿಚ್ಚ ಸುದೀಪ್​, ಸೇರಿ ಹಲವರು ರಾ ರಾ ರಕ್ಕಮ್ಮ ಹಾಡಿನ ಹುಕ್​ಅಪ್​ ಸ್ಟೆಪ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

 

ಅಂದಹಾಗೆ ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ ೩ಡಿ ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top