fbpx
ಸಮಾಚಾರ

‘ಚಾರ್ಲಿ 777’ ಸಿನಿಮಾ ನೋಡಿ ರಕ್ಷಿತ್ ಶೆಟ್ಟಿಗೆ ಕಾಲ್ ಮಾಡಿದ ರಜನಿಕಾಂತ್: ಹೇಳಿದ್ದೇನು ಗೊತ್ತಾ?

‘ಸಿಂಪಲ್​ ಸ್ಟಾರ್’ ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಸೂಪರ್ ಹಿಟ್​ ಆಗಿದೆ. ನಾಯಿ ಮತ್ತು ಶ್ವಾನದ ನಡುವೆ ಇರುವ ಬಾಂಧವ್ಯದ ಕಥೆಯನ್ನು ಇಟ್ಟುಕೊಂಡು ಈ ಚಿತ್ರ ಮೂಡಿಬಂದಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಸಖತ್​ ಮೆಚ್ಚಿಕೊಂಡಿದ್ದಾರೆ.
ಧರ್ಮ ಮತ್ತು ಚಾರ್ಲಿಯ ಬಾಂಧವ್ಯವನ್ನು ನೋಡಿ ಕನ್ನಡಿಗರು ಕಣ್ಣೀರಿಟ್ಟಿದ್ದಾರೆ. ಇದೀಗ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಕೂಡ ‘777 ಚಾರ್ಲಿ’ ಚಿತ್ರವನ್ನು ವೀಕ್ಷಿಸಿ ಭೇಷ್ ಎಂದಿದ್ದಾರೆ.

ನಿನ್ನೆ ರಾತ್ರಿಯೇ ಮನೆಯಲ್ಲಿ ಚಾರ್ಲಿ 777 ಸಿನಿಮಾವನ್ನು ವೀಕ್ಷಿಸಿದ್ದಾರಂತೆ ರಜನಿಕಾಂತ್. ರಾತ್ರಿ ಸಿನಿಮಾ ನೋಡಿ, ಬೆಳಗ್ಗೆ ರಕ್ಷಿತ್ ಶೆಟ್ಟಿ ಅವರಿಗೆ ಕಾಲ್ ಮಾಡಿ, ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ರಜನಿ ಅವರು ಆಡಿದ ಮಾತಿಗೆ ಥ್ರಿಲ್ ಆಗಿರುವ ರಕ್ಷಿತ್, ಈ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

 

 

‘ಇವತ್ತಿನ ದಿನದ ಆರಂಭ ಅದ್ಭತವಾಗಿತ್ತು. ರಜಿನಿಕಾಂತ್ ಅವರಿಂದ ಫೋನ್ ಬಂದಿತ್ತು. ನಿನ್ನೆ ರಾತ್ರಿ ರಜನಿಕಾಂತ್ 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾದ ಅದ್ಭುತ ಮೆಕಿಂಗ್ ಗುಣಮಟ್ಟದ ಬಗ್ಗೆ, ಸಿನಿಮಾದ ಆಳವಾದ ವೀನ್ಯಾಸದ ಬಗ್ಗೆ ಹೆಚ್ಚು ಮಾತನಾಡಿದರು. ಮತ್ತು ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಆಧ್ಯಾತ್ಮಿಕ ಮಾತಿನ ಮೂಲಕ ಮುಗಿಸಿದರು. ಅಂತಹ ಮಾತುಗಳನ್ನು ಸೂಪರ್ ಸ್ಟಾರ್ ಅವರಿಂದನೇ ಕೇಳುವುದು ಅದ್ಭುತವಾಗಿತ್ತು. ಧನ್ಯವಾದಗಳು ರಜನಿ ಸರ್’ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top