fbpx
ಸಮಾಚಾರ

24 ವರ್ಷದ ಹಿಂದೆ ಪರೀಕ್ಷೆ ಬರೆದವನಿಗೆ 57ನೇ ವಯಸ್ಸಿನಲ್ಲಿ ಸಿಕ್ತು ಸರ್ಕಾರಿ ಕೆಲಸ

ಸರ್ಕಾರಿ ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದ ಆಂಧ್ರಪ್ರದೇಶದ ವ್ಯಕ್ತಿ ತನ್ನ 33ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು, 24 ವರ್ಷ ಕಾದ ಬಳಿಕ ತನ್ನ 57ನೇ ವಯಸ್ಸಿನಲ್ಲಿ ಉದ್ಯೋಗ ಪಡೆದಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಅಂತಿಮವಾಗಿ 1998 ರ ಜಿಲ್ಲಾ ಆಯ್ಕೆ ಸಮಿತಿ (DSC) ಬ್ಯಾಚ್‌ನಿಂದ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದರಿಂದ ಇದು ಸಂಭವಿಸಿದೆ. ಈ ಕ್ರಮದಿಂದ ಸುಮಾರು 4,500 ಅಭ್ಯರ್ಥಿಗಳ ಶಿಕ್ಷಕರಾಗುವ ಕನಸು ನನಸಾಯಿತು. ಅವರಲ್ಲಿ ಒಬ್ಬರು ಶ್ರೀಕಾಕುಳಂ ನಿವಾಸಿ ಅಲ್ಲಕ ಕೇದಾರೇಶ್ವರ ರಾವ್.

ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಲಕಾ ಕೇದಾರೇಶ್ವರ ರಾವ್ ಅವರು 24 ವರ್ಷಗಳ ಹಿಂದೆ 1998ರಲ್ಲಿ 33ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಸರ್ಕಾರಿ ಶಿಕ್ಷಕರನ್ನು ಆಯ್ಕೆ ಮಾಡಲು ಬರೆಯುವ ಪರೀಕ್ಷೆ DSC ಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರೂ ಕಾನೂನು ಸಮಸ್ಯೆಗಳಿಂದಾಗಿ ಅಂತಿಮ ಆಯ್ಕೆಯು ವಿಳಂಬವಾಯಿತು. ಬರೋಬರಿ 24 ವರ್ಷಗಳ ವಿಳಂಬವಿದು. ಪ್ರಸ್ತುತ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಲಕಾ ಕೇದಾರೇಶ್ವರ ರಾವ್ ಅವರು ಆಯ್ಕೆಯಾಗಿದ್ದಾರೆ ಎಂದು ತೀರ್ಪು ಬಂದಿದೆ. ಈ ತೀರ್ಪು ಬಂದ ಈ ಸಂದರ್ಭದಲ್ಲಿ ಕೇದಾರೇಶ್ವರ ರಾವ್ ವಯಸ್ಸು 57 ವರ್ಷ.

 

 

ಡಿಎಸ್‌ಸಿ 1998ರ ಕಡತವನ್ನು ತೆರವುಗೊಳಿಸಿ ಕೇದಾರೇಶ್ವರ್‌ಗೆ ನೇಮಕಾತಿಯ ಆದೇಶ ನೀಡಿದಾಗ ಅವರ ಜೀವನವೇ ಬದಲಾಯಿತು. ಈ ಸಂದರ್ಭದಲ್ಲಿ ಉತ್ಸುಕನಾಗಿ ಮಾತನಾಡಿರುವ ಅವರ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top