fbpx
ಸಮಾಚಾರ

ಅಭ್ಯಾಸ ಪಂದ್ಯದಲ್ಲಿ ಭಾರತದ ವಿರುದ್ಧವೇ ಆಡಲಿದ್ದಾರೆ ಈ ಪ್ರಮುಖ ಆಟಗಾರರು- ಬುಮ್ರಾ, ಪೂಜಾರ, ಪಂಥ್, ಪ್ರಸಿದ್ ಕೃಷ್ಣ!

ಭಾರತ ತಂಡದ ಕೈಯಲ್ಲಿ ಇದೀಗ ಎರಡು ಸರಣಿಗಳಿದ್ದು ಇದಕ್ಕೆ ಸಿದ್ಧತೆ ನಡೆಸಲು ಅಭ್ಯಾಸ ಪಂದ್ಯವನ್ನು ಆಡಲಿದೆ. ಇಂದು ಶುರುವಾಗುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಕೆಲ ಆಟಗಾರರು ಎದುರಾಳಿ ತಂಡದ ಪರ ಆಡಲಿದ್ದಾರೆ.

ಇಂದಿನಿಂದ ಭಾರತ ಮತ್ತು ಲೀಸೆಸ್ಟರ್ಷೈರ್ ಫಾಕ್ಸ್ ತಂಡಗಳ ವಿರುದ್ಧ 4 ದಿನಗಳ ಕಾಲ ಅಭ್ಯಾಸ ಪಂದ್ಯ ನಡೆಯಲಿದೆ. ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಭಾರತ ತಂಡದ ಕೆಲ ಆಟಗಾರರು ಎದುರಾಳಿ ತಂಡದಲ್ಲಿ ಆಡುತ್ತಿದ್ದಾರೆ. ಹಾಗಾದರೆ ಉಭಯ ತಂಡಗಳ ಪ್ಲೇಯಿಂಗ್ 11 ಹೇಗಿದೆ ನೋಡೋಣ ಬನ್ನಿ.

ಮೊದಲಿಗೆ ಭಾರತ ತಂಡದ ಪರ ನಾಯಕನಾಗಿ ರೋಹಿತ್ ಶರ್ಮ ತಂಡವನ್ನು ಮುನ್ನಡೆಸಿದರೆ ಇವರಿಗೆ ಸಾಥ್ ನೀಡಲು ಶುಭ್ಮನ್ ಗಿಲ್ ಆರಂಭಿಕರಾಗಿ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಕೆ ಎಸ್ ಭಾರತ್ ವಿಕೆಟ್ ಕೀಪಿಂಗ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಥಾಕೂರ್ಆಲ್ರೌಂಡರ್​ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇನ್ನು ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ತಮ್ಮ ಜವಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಎದುರಾಳಿ ಲೀಸೆಸ್ಟರ್ಷೈರ್ ತಂಡವನ್ನು ಗಮನಿಸಿದರೆ ಇದರಲ್ಲಿ ಭಾರತದ ಭಾರತದ ಚೇತೇಶ್ವರ್ ಪೂಜಾರ, ಜಸ್​ಪ್ರೀತ್ ಬುಮ್ರಾ, ರಿಷಭ್ ಪಂತ್ ಮತ್ತು ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ. ಇವರನ್ನು ಹೊರೆತುಪಡಿಸಿ ಲೀಸೆಸ್ಟರ್ಷೈರ್ ತಂಡವನ್ನು ಸ್ಯಾಮ್ ಎವಾನ್ಸ್ ಮುನ್ನಡೆಸಲಿದ್ದಾರೆ. ರೆಹಾನ್ ಅಹ್ಮದ್, ಸ್ಯಾಮ್ ಬೇಟ್ಸ್, ನಾಟ್ ಬೌಲೇ, ವಿಲ್ ಡೇವಿಸ್, ಜೋ ಎವಿಶನ್, ಲೂಯಿಸ್ ಕಿಂಬ್ಲರ್, ಅಬಿ ಸಖಂಡೆ, ರೋಮ್ ವಾಲ್ಕರ್ ಸ್ಥಾನ ಪಡೆದುಕೊಂಡಿದ್ದಾರೆ.

ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮದ್ಯಾಹ್ನ 3 ಗಂಟೆಗೆ ಶುರುವಾಗಲಿದ್ದು ಅಭ್ಯಾಸ ಪಂದ್ಯ ನೇರ ಪ್ರಸಾರವಾಗದೇ ಇರುವ ಕಾರಣ ಲೈವ್ ಸ್ಟ್ರೀಮಿಂಗ್ ಅನ್ನು ನೀವು Foxes TV YouTube ಚಾನಲ್‌ನಲ್ಲಿ ವೀಕ್ಷಿಸಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top