fbpx
ಸಮಾಚಾರ

ವೃಶ್ಚಿಕಾಸನದಲ್ಲಿ 29 ನಿಮಿಷಗಳ ಕಾಲ ನಿಂತು ವಿಶ್ವ ಧಾಖಲೆ ಬರೆದ ಯುವಕ! ವಿಡಿಯೋ ವೈರಲ್

ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಲಲು ಯೋಗ ಎಂಬುದು ಬಹಳ ಮುಖ್ಯವಾದ ಅಂಶ ವಾಗಿರುತ್ತದೆ. ಯೋಗ ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಆದರೆ ಯೋಗ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಕ್ಕೆ ತಕ್ಕ ಪರಿಶ್ರಮ ಬೇಕಾಗುತ್ತದೆ. ಇದೀಗ 21 ವರ್ಷದ ಯೋಗ ಗುರುವೊಬ್ಬರು ಮಾಡಿರುವ ಸಾಹಸ ವಿಶ್ವ ದಾಖಲೆಯ ಪಟ್ಟಿ ಸೇರಿದೆ.

ಯೋಗದಲ್ಲಿ ಅತ್ಯಂತ ಕಠಿಣವಾದ ಆಸನ ಎಂದರೆ ಅದು ವೃಶ್ಚಿಕಾಸನ. ಈ ಆಸನವನ್ನು ಮಾಡುವುದು ಅಷ್ಟೊಂದು ಸುಲಭವಲ್ಲ. ಆದರೆ ದುಬೈ ಮೂಲದ 21 ವರ್ಷದ ತರುಣನೊಬ್ಬ ಸುಮಾರು 29 ನಿಮಿಷ 4 ಸೆಕೆಂಡುಗಳ ಕಾಲ ಈ ಆಸನವನ್ನು ಮಾಡುವ ಮೂಲಕ ವಿಶ್ವ ಧಾಖಲೆಯನ್ನು ನಿರ್ಮಿಸಿದ್ದಾರೆ.

 

 

ಈ ಆಸನದಲ್ಲಿ ಮೊಣಕೈವರೆಗೆ ತೋಳುಗಳನ್ನು ನೆಲದ ಮೇಲೆ ಊರಿ ಕೇವಲ ಇವುಗಳ ಮೇಲೆ ದೇಹದ ಭಾರವನ್ನು ಹಾಕಿ ದೇಹವನ್ನು ಬಗ್ಗಿಸಬೇಕು. ಇದನ್ನು ಸ್ಕಾರ್ಪಿಯೊ ಆಕಾರ ಎಂದು ಸಹ ಕರೆಯುತ್ತಾರೆ. ಹೇಳಿದಷ್ಟು ಸುಲಭವಲ್ಲ ಈ ಆಸನ. ಇದಕ್ಕೆ ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಮತ್ತು ಕೆಲವು ಯೋಗ ಪಟುಗಳು ಈ ಆಸನವನ್ನು ಕೇವಲ ಕೆಲವು ಸೆಕೆಂಡ್ ಗಳ ಕಾಲ ಮಾತ್ರ ಮಾಡುತ್ತಾರೆ.

ಆದರೆ ದುಬೈ ಮೂಲದ ಯೋಗ ಬೋಧಕರಾದ ಯಶ್ ಮನ್ಸುಖ್ಭಾಯ್ ಮೊರಾಡಿಯಾ ಅವರು 29 ನಿಮಿಷ 4 ಸೆಕೆಂಡುಗಳ ಕಾಲ ಈ ಆಸನದಲ್ಲಿ ಧೃಡವಾಗಿ ನಿಂತಿದ್ದಾರೆ. ಈ ಮೂಲಕ ಅತಿ ಹೆಚ್ಚು ನಿಮಿಷಗಳ ಕಾಲ ವೃಶ್ಚಿಕಾಸಾನದಲ್ಲಿ ನಿಂತ ವ್ಯಕ್ತಿ ಎಂಬ ಸಾಧನೆ ಮಾಡಿ ಗಿನ್ನಿಸ್ ಧಾಖಲೆಯ ಪುಟ ಸೇರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top