fbpx
ಸಮಾಚಾರ

ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಇಂದು ರಿಲೀಸ್! ಯಾವ ಯಾವ ಭಾಷೆಯಲ್ಲಿ ಯಾವ ಯಾವ ನಟರು ಬಿಡುಗಡೆ ಮಾಡಲಿದ್ದಾರೆ ಗೊತ್ತಾ?

ನಟ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆಗೆ ಇನ್ನು ಕೆಲವೇ ಕ್ಷಣಗಳು ಬಾಕಿ ಇದೆ. ಟೀಸರ್ ಮತ್ತು ರ ರ ರಕ್ಕಮ್ಮ ಹಾಡಿನ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಚಿತ್ರ ತಂಡ ಇದೀಗ ಟ್ರೈಲರ್ ಮೂಲಕ ಯಾವ ಮ್ಯಾಜಿಕ್ ಮಾಡಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ಪಾನ್ ಇಂಡಿಯಾ ಸಿನಿಮಾ ವಾಗಿದ್ದು ಇಂಗ್ಲಿಷ್ ಒಳಗೊಂದು ಒಟ್ಟು 6 ಭಾಷೆಗಳಲ್ಲಿ ಬಿಡುಗಡೆ ಯಾಗಲಿದೆ. ಈಗಾಗಲೇ ಇದರ 3D ಟ್ರೈಲರ್ ಅನ್ನು ಚಿತ್ರ ತಂಡ ನೆನ್ನೆ ಬಿಡುಗಡೆ ಮಾಡಿದೆ. ಕೇವಲ ಮಾದ್ಯಮದವರು ಮತ್ತು ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಟ್ರೈಲರ್ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ಯಾವ ಯಾವ ಭಾಷೆಯಲ್ಲಿ ಯಾವ ಯಾವ ಸ್ಟಾರ್ ನಟರು ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಇಂದು ಸಂಜೆ 5.02 ನಿಮಿಷಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ತೇಜ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡುತ್ತಿದ್ದಾರೆ. ನೆನ್ನೆ ರವಿಚಂದ್ರನ್, ಶಿವ್ ರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಕನ್ನಡದ ಟ್ರೈಲರ್ ಬಿಡುಗಡೆ ಮಾಡಿರುವ ಕಾರಣ ಇಂದು ನಟರ ಹೆಸರು ಘೋಷಿಸಿ ಬಿಡುಗಡೆ ಮಾಡುತ್ತಾರಾ ಅಥವಾ ಹಾಗೆ ಬಿಡುಗಡೆ ಮಾಡುತ್ತಾರಾ ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top