fbpx
ಸಮಾಚಾರ

ಮುದ್ದಿನ ನಾಯಿಗೆ ಮನೆಯಲ್ಲಿ ಸೀಮಂತ ಕಾರ್ಯ: ಫೋಟೋಸ್ ವೈರಲ್

ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ಮನೆಮಂದಿಯೆಲ್ಲಾ ಸಂಭ್ರಮಿಸಿ ಅವಳಿಗೆ ಸೀಮಂತ ಕಾರ್ಯ ಮಾಡೋದನ್ನ ನೋಡಿದಿವಿ. ಆದರೆ ಇಲ್ಲೊಂದು ಕುಟುಂಬ ತಮ್ಮ ಮನೆಯ ಮುದ್ದಿನ ನಾಯಿ ಚಿಂಕವ್ವ ಗರ್ಭವಾಗಿದ್ದರಿಂದ ಅದಕ್ಕೆ ಸೀಮಂತ ಮಾಡುವ ಮೂಲಕ ಮನೆಮಂದಿಯೆಲ್ಲಾ ಸಂಭ್ರಮಿಸಿದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದ ನಾಟಕ ಕಲಾವಿದೆ ಜ್ಯೋತಿ ಗುಳೇದಗುಡ್ಡ ತಮ್ಮ ಮುದ್ದಾದ ನಾಯಿಗೆ ಸೀಮಂತ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಪಿಂಕು, ಚಿಂಕು ಎಂಬ ಎರಡು ಜೂಲು ನಾಯಿಯನ್ನು ಸಾಕ್ಕಿದ್ದು ಇದರಲ್ಲಿ ಚಿಂಕು ಗಂಡು ಮತ್ತು ಪಿಂಕು ಹೆಣ್ಣು ನಾಯಿಯಾಗಿದೆ.

 

 

ಚಿಂಕವ್ವ ಹೆಸರಿನ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ, ಅರಿಶಿಣ ಹಚ್ಚಿ, ಆರತಿ ಬೆಳಗಿ ಸೀಮಂತ ನಡೆಸಿದ್ದಾರೆ. ಜೊತೆಗೆ ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು ಹಂಪಲು, ಸಿಹಿ ತಿನಿಸು ಮಾಡಿ ಬಡಿಸಿದ್ದಾರೆ. ಸೀಮಂತ ಕಾರ್ಯದ ವೇಳೆ ನಾಯಿಯೂ ಶಾಂತವಾಗಿ ಕುಳಿತಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top