fbpx
ಸಮಾಚಾರ

37 ವರ್ಷಗಳ ಬಳಿಕ 10 ನೇ ತರಗತಿಯಲ್ಲಿ ಪ್ರಥಮ ದರ್ಜಿಯಲ್ಲಿ ಪಾಸಾದ ತಾಯಿ!

ಶಿಕ್ಷಣ ಎಂಬುದು ಪ್ರತಿಯೊಬ್ಬರ ಹಕ್ಕು. ಆದರೆ ಕೆಲವರು ತಮ್ಮ ವೈಯಕ್ತಿಕ ಕಾರಣದಿಂದ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿರುವ ಹಲವಾರು ಪ್ರಸಂಗಗಳು ನಮಗೆಲ್ಲರಿಗೂ ಗೊತ್ತು. ಆದರೆ ಇಲ್ಲೊಬ್ಬ ಮಹಿಳೆ 37 ವರ್ಷಗಳ ಬಳಿಕ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದು ಪ್ರಥಮ ದರ್ಜಿಯಲ್ಲಿ ಉತ್ತೀರ್ಣರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಹಿಳೆಯ ಪುತ್ರ ತನ್ನ ತಾಯಿಯ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣವಾದ ಲಿಂಕ್ಡ್ಇನ್ ಅಲ್ಲಿ ವಿವರಿಸಿದರು. ತನ್ನ ತಾಯಿಗೆ 16 ವರ್ಷವಿರುವಾಗಲೀ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಹೀಗಾಗಿ ಮನೆಯ ಸಂಪೂರ್ಣ ಜವಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರು ಎಂದು ತಿಳಿಸಿದರು.

ಡಿಸೆಂಬರ್ 2021 ರಲ್ಲಿ ಪ್ರಸಾದ್ ಅವರ ತಾಯಿ ಮತ್ತೆ ಶಿಕ್ಷಣ ಪಡೆಯಲು ನಿರ್ಧರಿಸಿದರು. ಇದರ ಕುರಿತು ಐರ್ಲೆಂಡ್ ನಲ್ಲಿ ವಾಸಿಸುತ್ತಿದ್ದ ತಮ್ಮ ಮಗ ಪ್ರಸಾದ್ ಹಾಗು ಅವರ ಇನ್ನೊಬ್ಬ ಮಗ ಮತ್ತು ಸೊಸೆಯ ಬಳಿ ಈ ವಿಚಾರವನ್ನು ಮುಚ್ಚಿಟ್ಟಿದ್ದರು. ನಾನು ಪ್ರತಿ ಬಾರಿ ನಮ್ಮ ಅಮ್ಮನಿಗೆ ರಾತ್ರಿಯ ಸಮಯದಲ್ಲಿ ಕರೆ ಮಾಡಿದಾಗ ಅವರು ನಾನು ವಾಕಿಂಗ್ ಹೋಗಿರುವುದಾಗಿ ಹೇಳಿದರು. ಆದರೆ ವಾಸ್ತವವಾಗಿ ಅವರು ರಾತ್ರಿ ಶಾಲೆಗೆ ಹೋಗುತ್ತಿದ್ದು, ಈ ವಿಷಯವನ್ನು ತಮ್ಮ ತಂದೆ ಮತ್ತು ಸಹೋದರನಿಂದಲೂ ಮರೆಮಾಡುವಲ್ಲಿ ತಮ್ಮ ತಾಯಿ ಯಶಸ್ವಿಯಾಗಿದ್ದರು ಎಂದು ತಿಳಿಸಿದರು.

ಅವಳ ದಿನಗಳು ಪ್ರಾರಂಭವಾಗುತ್ತಿದ್ದು 10ನೇ ತರಗತಿಯ ಪಠ್ಯಕ್ರಮದಿಂದ. ಒಂದು ದಿನ ನಾನು ಭಾರತಕ್ಕೆ ಹಿಂತಿರುಗಿದಾಗ, ಅವಳು ನನಗೆ ತನ್ನ ನೋಟ್‌ಬುಕ್ ಅನ್ನು ತೋರಿಸಿದಳು ಮತ್ತು ಅವಳು ಬೀಜಗಣಿತ ಮತ್ತು ಇಂಗ್ಲಿಷ್‌ನಲ್ಲಿ ತೋರಿದ ಸಾಧನೆ ನೋಡಿ ನಾನು ಆಶ್ಚರ್ಯಚಕಿತನಾದೆ. ಹಲವು ವರ್ಷಗಳ ಬ್ರೇಕ್‌ನ ನಂತರ ಶಿಕ್ಷಣ ಪುನಾರಂಭಿಸಿದ ಅವಳು ಅವರ ಬ್ಯಾಚ್‌ನ ಅದ್ಭುತ ವಿದ್ಯಾರ್ಥಿಯಾಗಿದ್ದಳು. ಅವಳ ಪರೀಕ್ಷೆಗಳು ಮಾರ್ಚ್‌ನಲ್ಲಿದ್ದರೆ, ನನ್ನ ಮದುವೆ ಫೆಬ್ರವರಿಯಲ್ಲಿ ನಿಗದಿಯಾಗಿತ್ತು. ಹೀಗಿದ್ದೂ ಆಕೆ ಎಲ್ಲವನ್ನು ಒಟ್ಟೊಟ್ಟಿಗೆ ಸಮರ್ಪಕವಾಗಿ ನಿಭಾಯಿಸಿದ್ದಳು. ಇಷ್ಟೆಲ್ಲಾ ಕಾರ್ಯಗಳನ್ನು ಮಾಡಿ ಆಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 79.6 ರಷ್ಟು ಅಂಕಗಳನ್ನು ಗಳಿಸಿ ಪಾಸಾಗಿದ್ದಾರೆ ಎಂದು ಅವರ ಮಗ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top