fbpx
ಸಮಾಚಾರ

ಸಿನಿಪ್ರಿಯರಲ್ಲಿ ಸಂಚಲನ ಸೃಷ್ಟಿಸಿದ ವಿಕ್ರಾಂತ್ ರೋಣ ಟ್ರೇಲರ್: ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ವೀವ್ಸ್ ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಮೇಲೆ ವಿಪರೀತ ಕುತೂಹಲ ಹುಟ್ಟುಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ, ಚಿತ್ರದ ಬಗ್ಗೆ ಸುದೀಪ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಕೋಡಿಯೊಡೆಯುತ್ತಿದೆ.

ಇದೀಗ ಚಿತ್ರ ಅಫೀಶಿಯಲ್ ಟ್ರೇಲರ್ ರಿಲೀಸ್ ಆಗಿದ್ದು ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನಯು ದುಪ್ಪಟ್ಟು ಮಾಡಿದೆ. ಕಥೆಯಲ್ಲಿನ ಟ್ವಿಸ್ಟ್ ಗಳು ಸಿನಿ ಪ್ರೇಮಿಗಳಲ್ಲಿ ಸಿನಿಮಾ ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಟ್ರೈಲರ್​ ನಲ್ಲಿ ಕಿಚ್ಚ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ನಿರ್ದೇಶಕ ಅನುಫ್ ಭಂಡಾರಿ ಸಖತ್ ಟ್ವಿಸ್ಟ್ ನೀಡಿದ್ದು, ಟ್ರೈಲರ್ ನೋಡಿದವರ ಮನಗೆದ್ದಿದ್ದಾರೆ. ಟ್ರೈಲರ್ ನೋಡಿದ ಕನ್ನಡ ಸಿನಿ ರಸಿಕರು ಇದು ಸ್ಯಾಂಡಲ್​ ವುಡ್​ನ್ನು ಇನ್ನೊಂದು ಲೇವಲ್​ಗೆ ತೆಗೆದುಕೊಂಡು ಹೋಗುವುದು ಪಕ್ಕಾ ಎನ್ನುತ್ತಿದ್ದಾರೆ.

 

 

ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ವೀವ್ಸ್:
ಉಳಿದಂತೆ ವಿಕ್ರಾಂತ್ ರೋಣ ಟ್ರೇಲರ್ ಸಿಕ್ಕಾಪಟೆ ವೈರಲ್ ಆಗಿದೆ,. ಯೂಟ್ಯೂಬ್ ನಲ್ಲಿಯೂ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಬಿಡುಗಡೆಯಾಗಿರುವ ಎಲ್ಲಾ ಭಾಷೆಗಳಲ್ಲಿಯೂ ನಿರೀಕ್ಷೆಗೂ ಮೇರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.. ಇಲ್ಲಿಯವರೆಗೂ (ಬಿಡುಗಡೆಯಾದ 20 ಗಂಟೆ ಗಳಲ್ಲಿ) ಎಲ್ಲಾ ಭಾಷೆಗಳ ವರ್ಷನ್ ಗಳು ಸೇರಿ ಒಟ್ಟು ಸುಮಾರು ಇಪ್ಪತ್ತು ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದೆ.. ಇದರಲ್ಲಿ ಕನ್ನಡ 7 ಮಿಲಿಯನ್, ತೆಲುಗಿನಲ್ಲಿ 4 ಮಿಲಿಯನ್ಸ್, ಹಿಂದಿ 3 ಮಿಲಿಯನ್, ತಮಿಳಿನಲ್ಲಿ 3 ಮಿಲಿಯನ್, ಮಲೆಯಾಳಂ ನಲ್ಲಿ 2 ಮಿಲಿಯನ್ ಹಾಗೂ ಇಂಗ್ಲಿಷ್ ನಲ್ಲಿ 1 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top