fbpx
ಸಮಾಚಾರ

“ನಾನು ಶ್ರೀರಾಮನಲ್ಲ ಕೃಷ್ಣನೇ….ಪವಿತ್ರಾ ನನ್ನ ಜೀವನಕ್ಕೆ ಬಂದಿರುವುದು ನಾಲ್ಕು ವರ್ಷ….” ಪವಿತ್ರಾ ಲೋಕೇಶ್ ವಿಚಾರವಾಗಿ ನರೇಶ್​ ಹೇಳಿದ್ದೇನು?

ನಟಿ ಪವಿತ್ರಾ ಲೋಕೇಶ್​ ನಟನೆಯ ವಿಚಾರದಿಂದ ಸ್ಯಾಂಡಲ್​ವುಡ್ ಹಾಗು ಟಾಲಿವುಡ್​ ಜನರ ಮನಗೆದ್ದವರು. ಆದರೆ ಇದೀಗ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಅದೇ ಸುದ್ದಿ ಹರಿದಾಡುತ್ತಿದೆ. ಟಾಲಿವುಡ್​ನ ಹೆಸರಾಂತ ನಟ ನರೇಶ್​ ಅವರ ಜೊತೆ ಪವಿತ್ರಾ ಲೋಕೇಶ್​ ಅವರ ಸಂಬಂಧದ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಈಗಷ್ಟೇ ನರೇಶ್​ ಅವರ ಪತ್ನಿ ರಮ್ಯಾ ರಘುಪತಿ ಕೂಡ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ಎಲ್ಲಾ ಸುದ್ದಿಗಳ ಮಧ್ಯೆ ಪವಿತ್ರಾ ಲೋಕೇಶ್ ವಿಚಾರವಾಗಿ ನರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

“ರಮ್ಯಾ ಮಾಡ್ತಿರೋ ಆರೋಪಗಳೆಲ್ಲವು ಸುದ್ಧ ಸುಳ್ಳು. ಆಕೆ ಮೋಸಗಾತಿ. ನನಗೆ ಸರಿಯಾಗಿ ಊಟ ಕೂಡ ಹಾಕಿಲ್ಲ. ಏಳು ವರ್ಷಗಳಿಂದ ನಾವು ಜೊತೆಯಲ್ಲಿ ಇಲ್ಲ. ತುಂಬಾ ದಿನಗಳಿಂದ ಆಕೆ ಬೆಂಗಳೂರಿನಲ್ಲೇ ಇದ್ದಾಳೆ. ರಮ್ಯಾ ಬೇರೆಯವ್ರ ಜೊತೆ ಸಂಬಂಧವನ್ನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಸಾಲಗಳನ್ನು ಮಾಡಿದ್ದಾರೆ. ಪವಿತ್ರಾ ನನ್ನ ಜೀವನಕ್ಕೆ ಬಂದಿರುವುದು ಕೇವಲ ಮೂರು ನಾಲ್ಕು ವರ್ಷದ ಹಿಂದೆ, ಆದರೆ ನಾನು ರಮ್ಯಾ ಇಂದ ದೂರಾಗಿದ್ದು ಎಂಟು ವರ್ಷಗಳ ಹಿಂದೆ’ ಎಂದು ನರೇಶ್​ ಹೇಳಿದ್ದಾರೆ.

ಇನ್ನು ಪವಿತ್ರ ಲೋಕೇಶ್ ಅವರ ಬಗ್ಗೆ ಮಾತನಾಡಿರುವ ನರೇಶ್ ” ಪವಿತ್ರಾ ಲೋಕೆಶ್​ ಜೊತೆ ನನ್ನ ಗೆಳೆತನ ನಿಜ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್​. ನಾನು ಶ್ರೀರಾಮನಲ್ಲ ಕೃಷ್ಣನೇ..ನಾನು ಪವಿತ್ರ 6 ಸಿನಿಮಾದಲ್ಲಿ ನಟಿಸಿದ್ದೇವೆ, ಅವರ ಜೊತೆ ಹಲವು ಭಾರಿ ನನ್ನ ಇಡೀ ಕುಟುಂಬ ಸೇರಿ ಕಾರ್ಯಕ್ರಮ ಮಾಡಿದ್ದೇವೆ. ಆದರೆ, ಆಗ ರಮ್ಯಾ ರಘುಪತಿ ಬರುತ್ತಿರಲಿಲ್ಲ. ಅವರು ನನ್ನ ಸ್ನೇಹಿತೆ. ಅವರು ದೀಪಾವಳಿ ಹಬ್ಬ ಆಚರಿಸಿದ್ದು ಹೌದು ಇಡೀ ಫ್ಯಾಮಿಲಿ ಸೇರಿ ದೀಪಾವಳಿ ಆಚರಿಸಿದ್ದೇವೆ. ನಾನು ಡಿವೋರ್ಸ್ ಕೊಡ್ತಿರೋದನ್ನ ಪವಿತ್ರಾ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ. ಇದು ನನ್ನ ನಿರ್ಧಾರ. ” ಎಂದು ಹೇಳಿದ್ದಾರೆ.

“ನಾನು ಮುಂದೇನು ಮಾಡುತ್ತೇನೆ ಎಂಬುದು ನನಗೆ ಬಿಟ್ಟಿದ್ದು, ನಾನು ಮದುವೆ ಆಗುತ್ತೀನಾ? ಲಿವಿನ್‌ ನಲ್ಲಿ ಇರುತ್ತೇನಾ? ಗೆಳೆಯರಾಗೇ ಇದ್ದುಬಿಡುತ್ತೇವಾ ಅದೆಲ್ಲ ನನಗೆ ಬಿಟ್ಟದ್ದು ಮದುವೆಯಾದರೆ ಎಲ್ಲರಿಗೂ ಗೊತ್ತಾಗುವಂತೆಯೇ ಆಗುತ್ತೇನೆ..” ಎಂದಿದ್ದಾರೆ ನರೇಶ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top