fbpx
ಸಮಾಚಾರ

“ರ..ರ.. ರಕ್ಕಮ್ಮ” ರಿಲೀಸ್ ಆಯ್ತು ನಂತರ ವಿಕ್ರಾಂತ್ ರೋಣ ಚಿತ್ರದ ಮತ್ತೊಂದು ಹಾಡು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಮೇಲೆ ವಿಪರೀತ ಕುತೂಹಲ ಹುಟ್ಟುಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ, ಚಿತ್ರದ ಬಗ್ಗೆ ಸುದೀಪ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಕೋಡಿಯೊಡೆಯುತ್ತಿದೆ.

ರಾರಾ ರಕ್ಕಮ್ಮ ಹಾಡು ಈಗಾಗಲೇ ಎಲ್ಲೆಡೆ ಚಿಂದಿ ಉಡಾಯಿಸಿದೆ. ಅಷ್ಟರ ಮಟ್ಟಿಗೆ ಹಾಡು ವೈರಲ್ ಆಗಿದೆ. ಮೊನ್ನೆಯಷ್ಟೇ ಚಿತ್ರ ಅಫೀಶಿಯಲ್ ಟ್ರೇಲರ್ ರಿಲೀಸ್ ಆಗಿದ್ದು ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರ ಮದ್ಯೆ ಮತ್ತೊಂದು ಹಾಡನ್ನು ಚಿತ್ರಯಂದ ರಿಲೀಸ್ ಮಾಡಿದೆ.. ತಂದೆ ಮತ್ತು ಮಗಳ ಭಾಂದವ್ಯ ಸಾರುವ ಹಾಡು ಇದಾಗಿದ್ದು ನಿರ್ದೇಶಕ ಅನೂಪ್ ಭಂಡಾರಿಯವರೇ ಅದ್ಭುತವಾಗಿ ಸಾಹಿತ್ಯ ಬರೆದಿದ್ದು ಅಷ್ಟೇ ಅದ್ಭುತವಾಗಿ ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ.

 

 

“ತಣ್ಣನ ಬೀಸೋ ಗಾಳಿ
ಹಾಡದೆ ಜೋಜೋ ಲಾಲಿ
ಈ ನನ್ನ ಮಡಿಲೆ
ನಿನ್ನಾ ತೂಗೋ ಉಯ್ಯಾಲೆ
ತೂಗೋ ಉಯ್ಯಾಲೆ….” ಎಂಬ ಸಾಲುಗಳು ಕೇಳಲು ಮನಸಿಗೆ ಮುದ ನೀಡುತ್ತದೆ.

ಅಂದಹಾಗೆ ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ 3D ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top