fbpx
ಸಮಾಚಾರ

ನಟ ಕಿಶೋರ್ ದಾಸ್ ನಿಧನ: 30ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಯುವ ನಟ

ಅಸ್ಸಾಂನ ಸಾಕಷ್ಟು ಸಿನಿಮಾ, ಸೀರಿಯಲ್ ಮೂಲಕ ಮನೆಮಾತಾದ ಕಿಶೋರ್ ದಾಸ್ ನಿನ್ನೆ ವಿಧಿವಶರಾಗಿದ್ದಾರೆ. ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟನಿಗೆ ಇತ್ತೀಚಿಗೆ ಕೊರೋನಾ ವೈರಸ್ ಸೋಂಕು ತಗುಲಿತ್ತು.. ಈ ಹಿನ್ನಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

300 ಕ್ಕೂ ಹೆಚ್ಚು ಮ್ಯೂಸಿಕ್ ವೀಡಿಯೊಗಳಲ್ಲಿ ನಟಿಸಿರುವ 30 ವರ್ಷದ ನಟ ಕಿಶೋರ್ ದಾಸ್ ಈ ವರ್ಷದ ಮಾರ್ಚ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು. ಕಿಶೋರ್ 30 ವರ್ಷ ತುಂಬುವ ಮುನ್ನವೇ ಸಾವನ್ನಪ್ಪಿದ್ದನ್ನು ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.

ಕಿಶೋರ್ ದಾಸ್ ಅವರು ಹಾಡಿದ್ದ ಪ್ರಸಿದ್ಧ ಅಸ್ಸಾಮಿ ಹಾಡು ‘ತುರುತ್ ತುರುಟ್’ ಸೂಪರ್ ಹಿಟ್ ಆಗಿತ್ತು. ಅವರು ಕೊನೆಯದಾಗಿ ಅಸ್ಸಾಮಿ ಚಲನಚಿತ್ರ ದಾದಾ ತುಮಿ ಡಸ್ತೋ ಬೋರ್‌ ನಲ್ಲಿ ಕಾಣಿಸಿಕೊಂಡಿದ್ದರು. ಕಿಶೋರ್ ದಾಸ್ ಅವರಿಗೆ 2019 ರಲ್ಲಿ ‘ಕ್ಯಾಂಡಿಡ್ ಯಂಗ್ ಅಚೀವ್‌ಮೆಂಟ್’ ಪ್ರಶಸ್ತಿ ಮತ್ತು 2020-2021 ರಲ್ಲಿ ಅತ್ಯಂತ ಜನಪ್ರಿಯ ನಟನಿಗಾಗಿರುವ ಏಷ್ಯಾನೆಟ್ ಐಕಾನ್ ಪ್ರಶಸ್ತಿಯನ್ನು ನೀಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top