fbpx
ಸಮಾಚಾರ

ಈ ಬಾರಿ ಕನ್ನಡದಲ್ಲಿ ಒಂದಲ್ಲಾ ಎರಡೆರಡು ಬಿಗ್ ಬಾಸ್! ಹೇಗೆ ಅಂತೀರಾ- ಇಲ್ಲಿದೆ ಕುತೂಹಲಕಾರಿ ಸಂಗತಿ

ಕರ್ನಾಟಕದ ಜನಪ್ರುಯ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ನಟ ಕಿಚ್ಚ ಸುದೀಪ್ ನಿರೂಪಣೆ ಮೂಲಕ ಈ ಶೋ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದೆ. ಇದೀಗ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಇದು ಮೊದಲಿಗಿಂತ ಭಿನ್ನ ವಾಗಿರುತ್ತದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಅಭಿಮಾನಿಗಳಿಗೆ ಒಂದಲ್ಲಾ ಎರಡೆರಡು ಬಿಗ್ ಬಾಸ್ ಶೋ ನೋಡಬಹುದು. ಅದು ಕೂಡ ಕನ್ನಡದಲ್ಲೇ. ಹೌದು ಏಕೆಂದರೆ ಈ ಬಾರಿ ಬಿಗ್ ಬಾಸ್ ಎರಡು ರೀತಿಯಲ್ಲಿ ಪ್ರಸಾರವಾಗುತ್ತದೆ. ರೆಗ್ಯುಲರ್ ಕಾರ್ಯಕ್ರಮ ಬಿಗ್ ಬಾಸ್ ಇದ್ದರೆ ಮತ್ತೊಂದು ಓಟಿಟಿ ಯಲ್ಲಿ ಪ್ರಸಾರವಾಗುವ ಮಿನಿ ಬಿಗ್ ಬಾಸ್ ಶೋ. ಇವೆರಡು ಶೋ ಗಳನ್ನೂ ಕಿಚ್ಚ ಅವರೇ ನಿರೂಪಣೆ ಮಾಡಲಿದ್ದಾರೆ.

ಮಿನಿ ಬಿಗ್ ಬಾಸ್ ನಲ್ಲಿ ಪಾಲ್ಗೊಂಡ ಇಬ್ಬರು ವ್ಯಕ್ತಿಗಳಿಗೆ ರೆಗ್ಯುಲರ್ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಈಗಾಗಲೇ ಬಿಗ್ ಬಾಸ್ ಸ್ಪರ್ಧೆಗೆ ಪಾಲ್ಗೊಳ್ಳುವ ಸ್ಪರ್ದಿಗಳ ಹುಡುಕಾಟು ಶುರುವಾಗಿದ್ದು, ಈ ಬಾರಿಯ ಮಿನಿ ಬಿಗ್ ಬಾಸ್ ಹೇಗಿರುತ್ತದೆ ಎಂದು ನೋಡುವ ತವಕ ಜನರಿಗೆ ಹೆಚ್ಚಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಈ ಬಾರಿಯ ಬಿಗ್ ಬಾಸ್ ಗಾಗಿ ಆಯ್ಕೆ ಮಾಡಲಾಗುತ್ತಿದ್ದು, ಹಲವರ ಹೆಸರು ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top