fbpx
ಸಮಾಚಾರ

ತಾಯಿ ಆಗ್ತಿದ್ದಾರೆ ನಟಿ ಮಾನಸಾ ಜೋಷಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ `ಮಹಾದೇವಿ’ ಖ್ಯಾತಿ ನಟಿ

ಬಹುಭಾಷಾ ನಟಿ ಮಾನಸ ಜೋಶಿ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಾವು ತಾಯಿ ಯಾಗುತ್ತಿರುವ ವಿಷಯವನ್ನು ವಿಶೇಷ ಫೋಟೋಶೂಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಬಹುಪರಾಕ್ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಇವರು ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಮಿಂಚಿದರು. ಹಲವಾರು ಸೀರಿಯಲ್ ಗಳಲ್ಲಿ ಬಣ್ಣ ಹಚ್ಚಿದ್ದ ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಹಾದೇವಿ ಧಾರಾವಾಹಿಯಲ್ಲಿ. ಈ ಧಾರಾವಾಹಿಯಲ್ಲಿ ದೇವಿ ಪಾತ್ರದಲ್ಲಿ ನಟಿಸಿ ಸಾಯಿ ಎನಿಸಿಕೊಂಡಿದ್ದರು. ನಂತರ ಹಲವಾರು ದೇವಿ ಪಾತ್ರಗಳಿಗೆ ಇವರ ನಟನೆಯಿಂದ ಜೀವ ತುಂಬಿದರು.

ಇದಾದ ನಂತರ `ಮಂಗಳ ಗೌರಿ ಸೀರಿಯಲ್ ನಲ್ಲಿ ಕಳನಾಯಕಿಯಾಗಿ ಮಿಂಚಿದರು. ಇದೀಗ ತಮ್ಮ ವೃತಿ ಜೀವನಕ್ಕೆ ಸ್ವಲ್ಪ ಸಮಯ ಬಿಡುಮಾಡಿಕೊಂಡು ವಿಶೇಷ ಫೋಟೋಶೂಟ್ ಮಾಡಿಸಿ, ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಇವರ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top