fbpx
ಸಮಾಚಾರ

ರಾಜ್ಯದಲ್ಲಿ ಗಗನಕ್ಕೇರಿದ್ದ ಟೊಮೆಟೊ ಬೆಲೆ ದಿಢೀರನೆ ಪಾತಾಳಕ್ಕೆ: ಇಂದಿನ ಟೊಮೊಟೊ ಬೆಲೆ ಎಷ್ಟು ಗೊತ್ತಾ?

ಕಳೆದ ಕೆಲ ದಿನಗಳಿಂದ ಟೊಮೇಟೊ ಬೆಲೆ ಏರಿಕೆಯಾಗುತ್ತಿರುವುದು ಜನಸಾಮಾನ್ಯರನ್ನು ಭಯಭೀತರನ್ನಾಗಿಸಿದೆ. ಸೀಸನ್ ಹಣ್ಣುಗಳಿಗಿಂತ ದುಬಾರಿಯಾಗಿರುವ ಟೊಮೆಟೊ ಬೆಲೆ ಕಳೆದ ಎರಡು ವಾರಗಳಲ್ಲಿ ಕೆಜಿಗೆ 100 ರೂ. ಏರಿಕೆಯಾಗಿತ್ತು. ಆದರೆ ಈಗ ಟೊಮ್ಯಾಟೋ ಬೆಲೆ ದಿಢೀರ್ ಕುಸಿತ ಕಂಡಿದೆ.

ನೈಋತ್ಯ ಮುಂಗಾರು ಅಬ್ಬರ ವಿವಿಧ ಜಿಲ್ಲೆಗಳಲ್ಲಿ ಆರಂಭವಾಗಿದೆ. ತರಕಾರಿಗಳ ಬೆಲೆಗಳಲ್ಲಿ ಏರಿಳಿತ ಆರಂಭವಾಗಿದೆ. 100 ರೂ. ಗಡಿ ದಾಟಿದ್ದ ಟೊಮೆಟೋ ಬೆಲೆ ಈಗ ಕೆ. ಜಿ. 10 ರೂ. ತಲುಪಿದ್ದು, ರೈತ ಕಂಗಾಲಾಗಿದ್ದಾನೆ.

ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲೂ ಟೊಮೇಟೋ ಬೆಳೆಯಿಂದ ಭರಪೂರ ಇಳುವರಿ ಬಂದಿದೆ. ಅಕಾಲಿಕ ಮಳೆಯಿಂದ ಟೊಮೆಟೋ ಬೆಳೆಗೆ ಪೂರಕವಾದ ವಾತಾವರಣ ನಿರ್ಮಾಣವಾದ್ದರಿಂದ ಎಲ್ಲೆಡೆ ಉತ್ಪಾದನೆ ಹೆಚ್ಚಾಗಿದೆ. ಮೂಂದಿನ ದಿನಗಳಲ್ಲಿ ಕೂಡ ಟೊಮೇಟೋ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ..

ಟೊಮೇಟೋ ದರ ಶತಕ ಬಾರಿಸಿದಾಗ ಬೆಳೆ ಇರಲಿಲ್ಲ. ಹೀಗಾಗಿ ರೈತರು ಖುಷಿಯಿಂದ ಭಾರಿ ಪ್ರಮಾಣದಲ್ಲಿ ಟೊಮೇಟೋ ಬೆಳೆದಿದ್ದಾರೆ. ಟೊಮೇಟೋ ಕೊಯ್ಲುಆರಂಭವಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆಯು ಆಘಾತ ನೀಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top