ಬಿಬಿಎಂಪಿ ಯಲ್ಲಿ ಅನೇಕ ವರ್ಷಗಳಿಂದ ಖಾಲಿ ಇದ್ದ ಸುಮಾರು 1,032 ಹುದ್ದೆಗಳ ಭರ್ತಿಗೆ ಬಿಬಿಎಂಪಿ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ ಸಹಾಯಕ ಎಂಜಿನಿಯರ್, ಉಪನ್ಯಾಸಕರು ಸೇರಿದಂತೆ ಅನೇಕ ಹುದ್ದೆಗಳ ಭರ್ತಿಗಾಗಿ ಚಿಂತನೆ ನಡೆಸುತ್ತಿದೆ.
ಇದರ ಕುರಿತು ಶನಿವಾರ ಮಾತನಾಡಿದ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ “ಸಹಾಯಕ ಎಂಜಿನಿಯರ್, ಪರಿಸರ ಎಂಜಿನಿಯರ್, ಉಪನ್ಯಾಸಕರು, ಮುಖ್ಯ ಶಿಕ್ಷಕರು, ಕಿರಿಯ ಕಾನೂನು ಅಧಿಕಾರಿ, ಕಿರಿಯ ಎಂಜಿನಿಯರ್, ನೆಟ್‌ವರ್ಕ್ ಎಂಜಿನಿಯರ್, ಕಂದಾಯ ನಿರೀಕ್ಷಕರು ಸೇರಿದಂತೆ ವಿವಿಧ ವಿಭಾಗದಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಬಿಬಿಎಂಪಿ ಅಲ್ಲಿ ಇದುವರೆಗೂ 12,827 ಹುದ್ದೆಗಳು ಮಂಜೂರು ಆಗಿದ್ದರೂ, 7,369 ಹುದ್ದೆಯಲ್ಲಿರುವ ಅಧಿಕಾರಿ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ ಇನ್ನುಳಿದ 8,063 ಹುದ್ದೆಗಳು ಕಾಲಿ ಇದೆ. ಎರವಲು ಸೇವೆ ಮೇಲೆ ಕಾಮಗಾರಿ ವಿಭಾಗದಲ್ಲಿ 340 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ 22,105 ಮಂದಿ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ಕಂದಾಯ ಇಲಾಖೆಯಲ್ಲಿ 370, ತೋಟಗಾರಿಕೆ ಇಲಾಖೆಯಲ್ಲಿ 757, ಆರೋಗ್ಯದಲ್ಲಿ 658 ಮತ್ತು ಎಂಜಿನಿಯರಿಂಗ್ ಸೆಲ್‌ನಲ್ಲಿ 3,673 ಹುದ್ದೆಗಳು ಭರ್ತಿಯಾಗಿಲ್ಲ ಎಂದು ತಿಳಿಸಿದ್ದಾರೆ. ಇದರ ಕೊರತೆಯನ್ನು ನೀಗಿಸಲು ಹಲವರನ್ನು ಬಿಬಿಎಂಪಿ ನೋಯೋಜಿಸಿದರು ಕೂಡ ಅದರಲ್ಲಿ ಸುಮಾರು 340 ನೌಕರರು ಡೆಪ್ಯೂಟೇಶನ್‌ನಲ್ಲಿದ್ದಾರೆ ಮತ್ತು 22,105 ಹೊರಗುತ್ತಿಗೆ ಸಿಬ್ಬಂದಿಯ ಭಾಗವಾಗಿದ್ದಾರೆ. ಇದರಿಂದಾಗಿ ಸರ್ಕಾರ ಕೇಸಗಳನ್ನು ಮಾಡಲು ಬಹಳ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸ್ತಾವನೆ ಸಲ್ಲಸಿದ 1032 ಹುದ್ದೆ ವಿವರ
ಗ್ರೂಪ್‘ಬಿ’ ಟೆಕ್ನಿಕಲ್ 107 ಹುದ್ದೆಗಳು. ನಾನ್ ಟೆಕ್ನಿಕಲ್ 24 ಹುದ್ದೆಗಳು
ಗ್ರೂಪ್ ‘ಸಿ’ ಟೆಕ್ನಿಕಲ್ 200 ಹುದ್ದೆಗಳು. ನಾನ್ ಟೆಕ್ನಿಕಲ್ 701 ಹುದ್ದೆಗಳು
ಒಟ್ಟು ಟೆಕ್ನಿಕಲ್ 307 ಹುದ್ದೆಗಳು ಮತ್ತು ನಾನ್ ಟೆಕ್ನಿಕಲ್ 725 ಹುದ್ದೆಗಳು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
