ಖ್ಯಾತ ವಾಸ್ತುಶಾಸ್ತ್ರ ಪಂಡಿತರಾದ ಚಂದ್ರಶೇಖರ್ ಗುರಿಜಿ ಅವರನ್ನು ಇಂದು ದುಷ್ಕರ್ಮಿಗಳು ಭಕ್ತರ ಸೋಗಿನಲ್ಲಿ ಬಂದು ಮನಸೋಇಚ್ಚೆಯಂತೆ ಇವರನ್ನು ಬರ್ಬರವಾಗಿ ಚಾಕುವಿನಲ್ಲಿ ಇರಿದು ಹತ್ಯೆ ಮಾಡಿದ್ದಾರೆ. ಇವರ ಕೊಲೆಯ ವಿಡಿಯೋ cctv ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಆದ ನಂತರ ಟ್ಯಾಂಕ್ ಶುರು ಮಾಡಿದ ಪೊಲೀಸರು ಕೆಲವು ಮಾಹಿತಿಯನ್ನು ಕಲೆಹಾಕಿದ್ದಾರೆ. ಪ್ರಾರ್ಥಮಿಕ ತನಿಖೆಯಿಂದ ಸಿಕ್ಕಿರುವ ಮಾಹಿತಿ ಏನೆಂದರೆ ಹುಬ್ಬಳಿಯ ರೌಡಿಶೀಟರ್ ಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಿಗೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆಲ್ಲಾ ಪೂರ್ಣ ತನಿಖೆಯ ನಂತರವೇ ನಿಜಾಂಶ ತಿಳಿಯುತ್ತದೆ.
ಚಂದ್ರಶೇಖರ್ ಗುರೂಜಿ ಅವರು ಹುಬ್ಬಳಿಯ ಉಣಕಲ್ ಕ್ರಾಸ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ ನ ರೂಮ್ ನಂಬರ್ 220 ರಲ್ಲಿ ನೆಲೆಸಿದರು. ನಾಳೆ ಅವರು ರೂಮ್ ಕಾಲಿ ಮಾಡಬೇಕಿತ್ತು. ಆದರೆ ಇಂದು ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಳ್ಳುವ ನೆಪದಲ್ಲಿ ಹೋಟೆಲ್ ನ ರಿಸೆಪ್ಶನ್ ನಲ್ಲೆ ಅವರಿಗೆ ಮನಬಂದಂತೆ ಚಾಕುವಿನಿಂದ ಹಿರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
