ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ನಗರದಲ್ಲಿ ವ್ಯಕ್ತಿ ಒಬ್ಬ ಹಿಂದೂ ದೇವರು ಇರುವ ಪೇಪರ್ ನಲ್ಲಿ ಕೋಳಿ ಮಾಂಸವನ್ನು ತುಂಡು ತುಂಡಾಗಿ ಕತ್ತರಿಸಿ ಮಾರಾಟಮಾಡುತ್ತಿದ್ದ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಾಕೆ ತರುವಂತ ಕೆಲಸ ಮಾಡಿದ್ದಾನೆ ಎಂಬ ಆರೋಪದಡಿ ಇವನನ್ನು ಪೊಲೀಸರು ಇದೀಗ ಬಂಧಿಸಿದ್ದು ಪ್ರಕಾರ ದಾಖಲಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ತಾಲಿಬ್ ಹುಸೇನ್ ಮಾಂಸ ಮಾರಾಟ ಅಂಗಡಿ ಇಟ್ಟುಕೊಂಡಿದ್ದಾನೆ. ಈ ಅಂಗಡಿ ಬರುವ ಗ್ರಾಹಕರಿಗೆ ಈತ ಹಿಂದೂ ದೇವರುಗಳು ಇರುವ ಪೇಪರ್ ಅನ್ನು ಕಟ್ ಮಾಡಿ ಅದರಲ್ಲಿ ಕೋಳಿ ಮಾಂಸಗಳನ್ನು ತುಂಡು ತುಂಡಾಗಿ ಕತ್ತರಿಸಿ ಮಾರಾಟ ಮಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ತಾಲಿಬ್ ಹುಸೇನ್ ಈ ರೀತಿಯ ಚಟುವಟಿಕೆಯಿಂದ ನಮ್ಮ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತರುತ್ತಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದರು.
ದೂರು ದಾಖಲಿಸಿದ ಪೊಲೀಸರು ಪರೀಕ್ಷಿಸಲು ಸ್ಥಳಕ್ಕೆ ಆಗಮಿಸಿದರು. ಸ್ಥಳಕ್ಕೆ ಆಗಮಿಸಿದ ಪೋಲೀಸರ ಮೇಲೆ ಚಾಕುವಿನಿಂದ ಕೊಲ್ಲಲು ತಾಲಿಬ್ ಹುಸೇನ್ ಮುಂದಾಗಿದ್ದಾನೆ. ಇದೀಗ ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 153-ಎ, 295 ಎ ಮತ್ತು 307 ಅಡಿಯಲ್ಲಿ ಎಫ್ಐಆರ್ ಧಾಖಲಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
