ಮಳೆ ಇಂದ ಆಗುವ ಅನಾವುತಗಳು ಒಂದಲ್ಲಾ ಎರಡಲ್ಲಾ. ಇದರಿಂದ ಜನರಿಗೆ ಬಹಳಷ್ಟು ಕಿರಿ ಕಿರಿ ಹೆಚ್ಚಾಗುತ್ತದೆ. ಹೆಚ್ಚಾಗಿ ಸವಾರರಿಗೆ ಇದರಿಂದ ಬಹಳಷ್ಟು ಹಿಂಸೆ. ಇದೀಗ ಇದೆ ಹಿಂಸೆಯನ್ನು ಅನುಕೂಲ ಮಾಡಿಕೊಂಡ ಕ್ಯಾಬ್ ಸಂಸ್ಥೆಯು ತಮ್ಮ ಪ್ರಯಾಣಿಕರಿಗೆ ದುಬಾರಿ ಪ್ರಮಾಣದ ಬೆಲೆಯನ್ನು ತೋರಿಸಿದ್ದಾರೆ. ಇದರಿಂದ ಪ್ರಯಾಣಿಕ ಒಂದು ಕ್ಷಣ ಶಾಕ್ ಆಗಿದ್ದಾನೆ.
ಮಹಾನಗರಿ ಮುಂಬೈ ಅತ್ಯಂತ ಬ್ಯುಸಿ ಆದ ನಗರ. ಈ ನಗರದಲ್ಲಿ ಮಳೆ ಬಂದರೆ ಇವರ ಕಥೆ ಕೇಳೋರೇ ಇಲ್ಲಾ. ಏಕೆಂದರೆ ಮಳೆ ಇಂದ ರಸ್ತೆಗಳು ಜಲಾವೃತಿಗೊಂದು ಓಡಾಡಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಸಂಧರ್ಭದಲ್ಲಿ ತಾನು ಇದ್ದ ಸ್ಥಳದಿಂದ ಸುಮಾರು 50km ದೂರ ಇರುವ ತನ್ನ ಮನೆಗೆ ತಲುಪಬೇಕೆಂದು ಒಬ್ಬ ವ್ಯಕ್ತಿ ಊಬರ್ ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಆದರೆ ಈತನಿಗೆ ಅಚ್ಚರಿ ಎದುರಾಗಿತ್ತು. ಏಕೆಂದರೆ ಈತ ಇದ್ದ ಜಾಗದಿಂದ ತನ್ನ ಮನೆಗೆ ತಲುಪಲು ಊಬರ್ ಬಿಲ್ ಬರೋಬ್ಬರಿ 3000 ದಿಂದ ಹಿಡಿದು 5000 ವರೆಗೂ ತೋರಿಸುತ್ತಿತ್ತು.
Flight to goa is cheaper than my ride home #peakmumbairains pic.twitter.com/r3JLGAwQxc
— Shravankumar Suvarna (@ShravanSuvarna) June 30, 2022
ಈ ಕುರಿತು ಟ್ವೀಟ್ ಮಾಡುವ ಪ್ರಯಾಣಿಕ ಶ್ರವಣಕುಮಾರ್ ಸುವರ್ಣ ಅವರು ಊಬರ್ ಟ್ಯಾಕ್ಸಿ ಬಿಲ್ ಫೋಟೋ ಅಪ್ಲೋಡ್ ಮಾಡಿ ನನ್ನ ಮನೆಗೆ ಹೋಗುವುದಕ್ಕಿಂತ ಗೋವಾದ ವಿಮಾನವೇ ಚೀಪರ್ ಆಗಿದೆ ಎಂದು ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದರ ಕುರಿತು ತಮ್ಮ ಫನ್ನಿ ಕಮೆಂಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
