ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾ.ಗುರುಪ್ರೀತ್ ಕೌರ್ ಅವರೊಂದಿಗೆ ಇಂದು ಚಂಡೀಗಢದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮದುವೆಯಾದರು. ಕುಟುಂಬಸ್ಥರು, ಹತ್ತಿರದ ಸಂಬಂಧಿಗಳು, ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
48 ವರ್ಷದ ಭಗವಂತ್ ಮಾನ್ ಮತ್ತು 32 ವರ್ಷದ ಡಾ. ಗುರ್ಪ್ರೀತ್ ಕೌರ್ ಅವರ ಮದುವೆ ಬಹಳ ಸರಳವಾಗಿ ನಡೆಯಿತು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ನಾಯಕ ರಾಘವ ಛಡ್ಡಾ ಅವರು ಆಹ್ವಾನಿತ ಕೆಲವೇ ಅತಿಥಿಗಳಲ್ಲಿ ಸೇರಿದ್ದು, ಮದುವೆಗೆ ಸಾಕ್ಷಿಯಾದರು.
ಮಾನ್ ಗೆ ಇದು ಎರಡನೇ ಮದುವೆಯಾಗಿದ್ದು ಈ ಹಿಂದೆ ಇಂದರ್‌ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದರು. ಭಗವಂತ್ ಮಾನ್ ಅವರು 2015ರಲ್ಲಿ ತಮ್ಮ ಮೊದಲ ಪತ್ನಿ ಇಂದರ್‌ಪ್ರೀತ್ ಕೌರ್ ಅವರಿಂದ ವಿಚ್ಛೇದನ ಪಡೆದಿದ್ದರು. ಅವರಿಗೆ ಸೀರತ್ ಕೌರ್ (21) ಮತ್ತು ದಿಲ್ಶಾನ್ (17) ಎಂಬ ಇಬ್ಬರು ಮಕ್ಕಳಿದ್ದಾರೆ. ಇಂದರ್‌ಪ್ರೀತ್ ಅವರು ಮಕ್ಕಳ ಜತೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇಬ್ಬರೂ ಮಕ್ಕಳು ಹಾಜರಾಗಿದ್ದರು.. ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಇಬ್ಬರೂ ಮಕ್ಕಳು ಆಗಮಿಸಿದ್ದರು. ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ, ಗುರುಪ್ರೀತ್ ಕೌರ್ ಅವರನ್ನು ವಧುವಾಗಿ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿವಾಹ ಮಹೋತ್ಸವದಲ್ಲಿ ಆಪ್ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಸೇರಿದಂತೆ ಮತ್ತಿತರ ನಾಯಕರು ಭಾಗವಹಿಸಿದ್ದಾರೆ.ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮಾನ್ ಅವರ ಮದುವೆ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
