ರಾಜವಂಶದ ಹಿರಿಮಗ, ಶಿವರಾಜ್ ಕುಮಾರ್ ಅವರನ್ನು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ, ಸೆಂಚುರಿ ಸ್ಟಾರ್ ಮುಂತಾದ ಬಿರುದುಗಳಿಂದ ಸಂಭೋದಿಸಲಾಗುತ್ತದೆ.. ಅಷ್ಟೇ ಅಲ್ಲದೆ ಅಭಿಮಾನಿಗಳು ಪ್ರೀತಿಯಿಂದ ‘ಶಿವಣ್ಣ’ ಅಂತಲೇ ಕರೆಯುತ್ತಾರೆ. ಅಸಲಿಗೆ, ಶಿವರಾಜ್ ಕುಮಾರ್ ಅವರ ಒರಿಜಿನಲ್ ಹೆಸರು ಬೇರೇನೇ ಇದೆ..! ಏನದು ಅಂತೀರಾ? ಮುಂದೆ ಓದಿ
ಈ ವಿಷಯವನ್ನು ಅವರೇ ಬಹಿರಂಗ ಪಡಿಸಿದ್ದಾರೆ. ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ನನ್ನ ನಿಜವಾದ ಹೆಸರು ಶಿವರಾಜ್ ಕುಮಾರ್ ಅಲ್ಲ, ಬೇರೆಯದ್ದೇ ಇದೆ’ ಎಂದು ಹೇಳುವ ಮೂಲಕ ಅನೇಕರನ್ನು ಅಚ್ಚರಿಗೆ ದೂಡಿದ್ದಾರೆ. ಹಾಗಂತ ಅವರು ಹೆಸರು ಬದಲಾಯಿಸಿಕೊಂಡಿದ್ದು, ಸಿನಿಮಾ ರಂಗದ ಕೆಲವರಿಗೆ ಗೊತ್ತಿರುವ ವಿಚಾರ. ಆದರೆ, ಸಾರ್ವಜನಿಕರಿಗೆ ಈ ವಿಷಯವೇ ಗೊತ್ತಿರಲಿಲ್ಲ.
‘ನನ್ನ ಮೂಲ ಹೆಸರು ನಾಗರಾಜ ಶಿವಪುಟ್ಟ ಸ್ವಾಮಿ. ನನ್ನ ಪಾಸ್ಪೋರ್ಟ್ ಮೊದಲಾದ ದಾಖಲೆಗಳಲ್ಲಿ ಹೆಸರು ಹೀಗೆಯೇ ಇದೆ. ನಾನು ಓದಿ ಬೆಳೆದಿದ್ದು ಚೆನ್ನೈನಲ್ಲಿ. ಅಲ್ಲಿರುವ ಗೆಳೆಯರು ಪುಟ್ಟು ಅಂತಲೇ ಕರೆಯುತ್ತಾರೆ. ಇಲ್ಲಿ ಸಿನಿಮಾಗೆ ಎಂಟ್ರಿ ಆಗಬೇಕಾದರೆ ಅಪ್ಪಾಜಿ ಅವರ ಫ್ರೆಂಡ್ ರಾಮಸ್ವಾಮಿ ಅಂತ ಭೇಟಿ ಆದ್ರು. ರಾಜ್ಕುಮಾರ್ ಫ್ಯಾಮಿಲಿಯವರು ನೀವು, ಹೀಗಾಗಿ ಶಿವರಾಜ್ಕುಮಾರ್ ಅಂತ ಹೆಸರು ಇಟ್ಕೊಳಿ ಅಂದ್ರು. ಹೀಗಾಗಿ, ನಾನು ಶಿವರಾಜ್ಕುಮಾರ್ ಆದೆ’ ಎಂದಿದ್ದಾರೆ ಶಿವಣ್ಣ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
