ಜುಲೈ 8, 2022 ಶುಕ್ರವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ನವಮೀ : Jul 07 07:28 pm – Jul 08 06:25 pm; ದಶಮೀ : Jul 08 06:25 pm – Jul 09 04:39 pm
ನಕ್ಷತ್ರ : ಚಿತ್ತ: Jul 07 12:20 pm – Jul 08 12:13 pm; ಸ್ವಾತಿ: Jul 08 12:13 pm – Jul 09 11:25 am
ಯೋಗ : ಶಿವ: Jul 07 10:38 am – Jul 08 09:01 am; ಸಿಧ್ಧ: Jul 08 09:01 am – Jul 09 06:48 am
ಕರಣ : ಬಾಲವ: Jul 07 07:28 pm – Jul 08 07:02 am; ಕುಲವ: Jul 08 07:02 am – Jul 08 06:25 pm; ತೈತುಲ: Jul 08 06:25 pm – Jul 09 05:38 am; ಗರಿಜ: Jul 09 05:38 am – Jul 09 04:39 pm
Time to be Avoided
ರಾಹುಕಾಲ : 10:49 AM to 12:24 PM
ಯಮಗಂಡ : 3:35 PM to 5:11 PM
ದುರ್ಮುಹುರ್ತ : 08:35 AM to 09:26 AM, 12:50 PM to 01:41 PM
ವಿಷ : 05:38 PM to 07:11 PM
ಗುಳಿಕ : 7:38 AM to 9:13 AM
Good Time to be Used
ಅಮೃತಕಾಲ : 02:55 AM to 04:27 AM
ಅಭಿಜಿತ್ : 11:59 AM to 12:50 PM
Other Data
ಸೂರ್ಯೋದಯ : 6:03 AM
ಸುರ್ಯಾಸ್ತಮಯ : 6:46 PM
ನಿಮ್ಮ ಹಳೆಯ ಸ್ನೇಹಿತನ ಆಗಮನದಿಂದ ನಿಮ್ಮ ಮನಸ್ಸಿಗೆ ಬಲ ಬರುವುದು. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಪತ್ರ ನೋಡಿ ಮಕ್ಕಳ ಬಗ್ಗೆ ಹೆಮ್ಮೆ ಎನಿಸುವುದು. ಈ ಬಗ್ಗೆ ಸ್ನೇಹಿತರೊಂದಿಗೆ ಹಂಚಿಕೊಂಡು ಸಂತಸ ಪಡುವಿರಿ.
ಯಾರದೋ ಮಾತುಗಳಿಂದ ಸ್ತಿಮಿತ ಕಳೆದುಕೊಳ್ಳದಿರಿ. ಸಮಚಿತ್ತದಿಂದ ವರ್ತಿಸಿ ಸಂಭ್ರಮದಿಂದಿರಿ. ಮನಸ್ಸಿನ ಬೇಸರ ಕಳೆಯಲು ಪಾರ್ಕ್ ಇಲ್ಲವೇ ದೇವಸ್ಥಾನಗಳಿಗೆ ಭೇಟಿ ಕೊಡಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಗಹನವಾದ ಚರ್ಚೆಯು ಫೋನ್‌ನಲ್ಲಿನ ವ್ಯಾಟ್ಸ್‌ಆ್ಯಪ್‌ನಲ್ಲಿ ಬರುವುದು. ಇದಕ್ಕೆ ಪ್ರತಿಕ್ರಿಯಸದೆ ಅವರ ವಿಚಾರಧಾರೆಗಳನ್ನು ಮೆಲುಕು ಹಾಕಿರಿ. ಜಗತ್ತು ಯಾವ ರೀತಿಯಲ್ಲಿ ಚಿಂತಿಸುತ್ತದೆ ಎಂದು ತಿಳಿದು ಮನಸು ಖಿನ್ನತೆ ಅನುಭವಿಸುವುದು.
ನಿಮ್ಮ ದ್ವಂದ್ವ ನಿಲುವಿನ ಬಗ್ಗೆ ಕೆಲವರು ಕುಹಕವಾಡಬಹುದು. ಅದಕ್ಕಾಗಿ ನೀವು ತಲೆಕೆಡಿಸಿಕೊಳ್ಳಬೇಡಿ. ದೂರದ ಊರಿಗೆ ಪಯಣಿಸುವ ಯೋಗ ನಿಮ್ಮದಾಗುವುದು. ಸಂಗಾತಿಯನ್ನು ಪ್ರೀತಿಯಿಂದ ಕಾಣಿ.
ಅಂದುಕೊಂಡಿದ್ದಕ್ಕಿಂತ ಸುಲಭವಾಗಿ ಕೆಲವು ಸಮಸ್ಯೆಗಳು ಬಗೆಹರಿಯುವುದರಿಂದ ನೆಮ್ಮದಿಯ ವಾತಾವರಣ ಕಂಡು ಬರುವುದು. ನಿಮ್ಮಿಂದಾಗಿ ಕೆಲವರ ಮುಖವಾಡ ಕಳಚಿ ಬೀಳುವುದು. ಇನ್ನೊಬ್ಬರನ್ನು ದೂರುವುದನ್ನು ಬಿಟ್ಟುಬಿಡಿ.
ಎಲ್ಲರನ್ನು ಏಕಕಾಲಕ್ಕೆ ಸಂಭಾಳಿಸುವುದು ಕಷ್ಟವಾಗುತ್ತದೆ. ಹಾಗಾಗಿ ಕೆಲವು ಕೆಲಸಗಳನ್ನು ಮನೆಯ ಸದಸ್ಯರಿಗೆ ಹಂಚಿ ಬಿಡಿ. ಇಲ್ಲವೆ ಗೆಳೆಯರಿಗೆ ಕೆಲಸದ ಜವಾಬ್ದಾರಿಯನ್ನು ಹಂಚಿ. ಆಗ ನೀವು ಆರಾಮದಿಂದ ಇರಬಹುದು.
ಸಂಗಾತಿಯೊಂದಿಗೆ ಸಂತಸದ ವಿಷಯ ಹಂಚಿಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಖುಷಿಕೊಡುವುದು. ನೂತನ ಆಭರಣಗಳನ್ನು ಖರೀದಿಸುವಿರಿ. ಆಹಾರವನ್ನು ಅಥವಾ ಹಣ್ಣುಹಂಪಲುಗಳನ್ನು ಹಂಚಿ ತಿನ್ನಿ.
ಕನಸು ಕಾಣಬೇಕು. ಆದರೆ ಅದೇ ಜೀವನ ಆಗಲಾರದು. ವಾಸ್ತವದ ಕುರಿತಾಗಿಯೂ ಕೊಂಚ ಗಮನ ಕೊಡಿ. ದೂರ ಪ್ರಯಾಣ ಮುಂದೂಡುವುದು ಒಳ್ಳೆಯದು. ಸ್ನೇಹಿತರೊಂದಿಗೆ ಇಂದಿನ ಸಮಯವನ್ನು ಕಳೆಯುವಿರಿ. ಈ ದಿನ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ.
ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳಿತು. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನೀವು ಆಡುವ ಮಾತು ಪರರನ್ನು ನೋಯಿಸದಂತೆ ನೋಡಿಕೊಳ್ಳಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನಕ್ಕೆ ಚ್ಯುತಿ ಇರುವುದಿಲ್ಲ.
ಹಳೆಯ ಸ್ನೇಹಿತರು ಹೊಸದಾದ ಆಲೋಚನೆಯನ್ನು ನಿಮ್ಮ ಮುಂದೆ ಇಡುವರು. ಆ ಕ್ಷ ಣಕ್ಕೆ ಅದು ಸೂಕ್ತ ಎಂದು ತೋರಿಬರುವುದು. ಹಾಗಂತ ಅವರಿಗೆ ಆ ಕ್ಷ ಣವೆ ನಿಮ್ಮ ನಿರ್ಧಾರವನ್ನು ತಿಳಿಸದಿರಿ. ಕೆಲ ಸಮಯ ಕಾದು ಉತ್ತರಿಸುವುದು ಒಳ್ಳೆಯದು.
ಹೊಗಳಿಕೆಗೆ ಮನಸೋತು ಕೆಲವೊಮ್ಮೆ ಇಲ್ಲ-ಸಲ್ಲದ ಮಾತುಗಳು ನಿಮ್ಮ ಬಾಯಿಂದ ಹೊರ ಬರುವುದು. ಮಾತಿನ ಮೇಲೆ ಹಿಡಿತವಿರಲಿ. ಯಾರಾದರೂ ಹೊಗಳಿದರೆ ನಕ್ಕು ಸುಮ್ಮನಾಗಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಒಳ್ಳೆಯದು.
ಹಣದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ. ಇಲ್ಲದಿದ್ದರೆ ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಪರಾಕ್ರಮದ ಕೆಲಸಗಳಲ್ಲಿ ಯಶಸ್ಸನ್ನು ಹೊಂದುವಿರಿ. ಈ ದಿನ ಹಿರಿಯ ಸಹೋದರನ ಸಹಕಾರ ಸಿಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
