fbpx
ಸಮಾಚಾರ

11 ಜುಲೈ: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜುಲೈ 11, 2022 ಸೋಮವಾರ
ವರ್ಷ : 1944, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಾದಶೀ : Jul 10 02:14 pm – Jul 11 11:14 am; ತ್ರಯೋದಶೀ : Jul 11 11:14 am – Jul 12 07:46 am
ನಕ್ಷತ್ರ : ಅನುರಾಧ: Jul 10 09:55 am – Jul 11 07:50 am; ಜ್ಯೇಷ್ಠ: Jul 11 07:50 am – Jul 12 05:15 am; ಮೂಲ: Jul 12 05:15 am – Jul 13 02:21 am
ಯೋಗ : ಶುಕ್ಲ: Jul 11 12:45 am – Jul 11 09:01 pm; ಬ್ರಹ್ಮ: Jul 11 09:01 pm – Jul 12 04:59 pm
ಕರಣ : ಬಾಲವ: Jul 11 12:48 am – Jul 11 11:14 am; ಕುಲವ: Jul 11 11:14 am – Jul 11 09:33 pm; ತೈತುಲ: Jul 11 09:33 pm – Jul 12 07:46 am

Time to be Avoided
ರಾಹುಕಾಲ : 7:39 AM to 9:14 AM
ಯಮಗಂಡ : 10:49 AM to 12:25 PM
ದುರ್ಮುಹುರ್ತ : 12:50 PM to 01:41 PM, 03:23 PM to 04:13 PM
ವಿಷ : 12:57 AM to 02:21 AM
ಗುಳಿಕ : 2:00 PM to 3:35 PM

Good Time to be Used
ಅಮೃತಕಾಲ : 09:24 PM to 10:50 PM
ಅಭಿಜಿತ್ : 11:59 AM to 12:50 PM

Other Data
ಸೂರ್ಯೋದಯ : 6:03 AM
ಸುರ್ಯಾಸ್ತಮಯ : 6:46 PM

 

ವ್ಯಾಪಾರ ವ್ಯವಹಾರವು ನಿಮ್ಮ ಎಣಿಕೆಯಂತೆ ಆಗುತ್ತಿರುವುದಕ್ಕೆ ಕಾರಣ ಗುರು-ಹಿರಿಯರ ಆಶೀರ್ವಾದ. ಹಾಗಾಗಿ ನೀವು ಅವರಿಗೆ ಕೃತಜ್ಞರಾಗಿರಬೇಕು. ಹಿರಿಯರ ಮಾತನ್ನು ನಡೆಸಿಕೊಡುವುದೇ ದೇವರ ಪೂಜೆ ಮಾಡಿದಂತೆ. ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ.

 

ಆರ್ಥಿಕ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಬಹು ಮೊತ್ತದ ಹಣ ಕೈ ಸೇರುವಾಗ ಚಿಲ್ಲರೆ ಹಣವೂ ನಿಮ್ಮ ಕಣ್ಣು ತಪ್ಪಿಸಿ ಪರರ ಪಾಲಾಗುವುದು. ಮನೆಯಲ್ಲಿ ಸಂತಸದ ವಾತಾವರಣ. ಆರೋಗ್ಯ ಉತ್ತಮ.

 

ಇಂದು ಉತ್ಸಾಹ ಮತ್ತು ಆನಂದ ಹೆಚ್ಚಾಗಲಿದೆ. ಸಂಗಾತಿಯು ನಿಮ್ಮ ಯೋಜನೆಗಳಿಗೆ ಪೂರಕವಾಗಿ ಸ್ಪಂದಿಸುವರು. ಜೀವನ ಮತ್ತು ವೃತ್ತಿಯ ಆಕಾಂಕ್ಷೆಗಳು ಏರುಗತಿಯಲ್ಲಿ ಸಾಗುವುದು.

 

ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಸಿಕ ಒತ್ತಡಗಳಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇರುವುದು. ಆದಷ್ಟು ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಿರಿ. ಇನ್ನು ಹಲವು ದಿನ ಮೌನವಾಗಿರುವುದು ಕ್ಷೇಮಕರ.

 

 

ವಿಶೇಷ ಸಾಧನೆಯೊಂದು ನಿಮ್ಮಿಂದಾಗಲಿದ್ದು ಅದಕ್ಕೆ ಜನರ ಪೂರಕ ಪ್ರತಿಕ್ರಿಯೆ ಉಂಟಾಗುವುದು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.

 

 

ನೂತನ ವ್ಯಕ್ತಿಗಳ ಪರಿಚಯ. ಉತ್ತಮ ಆದಾಯವನ್ನು ಹೊಂದುವಿರಿ. ದಲ್ಲಾಲಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭ ಬರುವುದು. ಸಮಸ್ಯೆಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

 

 

ಖರ್ಚಿನ ದೃಷ್ಟಿಯಿಂದ ಹೊಸದಾದ ಒತ್ತಡ ಎದುರಾದರೂ ಬೇರೆ ರೂಪಗಳಿಂದ ಹಣವು ಹರಿದು ಬರುವುದರಿಂದ ಅನುಕೂಲವಾಗುವುದು. ಈದಿನ ನಿಮ್ಮ ಕಾರ್ಯಗಳು ಸುಗಮವಾಗುವುದು. ನಿಮ್ಮ ಸಂತಸಕ್ಕೆ ಮಡದಿ ಮಕ್ಕಳು ಸಹಾಯ ಮಾಡುವರು.

 

 

ಚಾಣಾಕ್ಷ ಮತಿಗಳಾದ ನೀವು ಯೋಚಿಸದೆ ಯಾವ ಕೆಲಸವನ್ನು ಮಾಡಲಾರಿರಿ. ಆದರೆ ಈದಿನ ಅತಿಯಾದ ಆತ್ಮವಿಶ್ವಾಸದಿಂದ ಮಾಡುವ ಕೆಲಸವು ಕೆಟ್ಟು ಹೋಗುವ ಸಾಧ್ಯತೆಗಳಿದ್ದು ಹೆಚ್ಚಿನ ಬೀಗುವಿಕೆಗಿಂತ ಬಾಗಿ ನಡೆಯುವುದೇ ಒಳ್ಳೆಯದು.

 

ನಿಮ್ಮ ಕಷ್ಟದ ದಿನಗಳು ಕೆಲವೇ ದಿನಗಳಲ್ಲಿ ಕರಗಿ ಹೋಗಲಿವೆ. ಉತ್ತಮ ಗ್ರಹ ಸಂಚಾರದಿಂದ ನಿಮ್ಮನ್ನು ವಿರೋಧಿಸುತ್ತಿದ್ದವರು ನಿಮಗೆ ಹಣಕಾಸಿನ ಸಹಾಯ ಮಾಡಲು ಮುಂದೆ ಬರುವರು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

 

 

ನಿಮಗೆ ತಿಳಿಯದಂತೆ ಕೆಲವು ಹಿತಶತ್ರುಗಳ ಕಾಟ ಆರಂಭವಾಗುವುದು. ಬೂದಿ ಮುಚ್ಚಿದ ಕೆಂಡದಂತೆ ಇರುವ ಕೆಲವರು ಏಕಾಏಕಿ ನಿಮ್ಮ ಮೇಲೆ ಏರಿ ಬರುವ ಸಂದರ್ಭವಿರುತ್ತದೆ. ಲಕ್ಷ್ಮೀನಾರಸಿಂಹದೇವರನ್ನು ಪ್ರಾರ್ಥಿಸಿ.

 

ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು. ಹಾಗಾಗಿ ಮನೆಯ ಸದಸ್ಯರೊಡನೆ ಮನಸ್ತಾಪ ಮಾಡಿಕೊಳ್ಳದಿರಿ. ಮಕ್ಕಳ ಪ್ರಗತಿಯು ನಿಮಗೆ ಸಂತಸವನ್ನು ನೀಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಸಣ್ಣದಾದ ಮಾತುಗಳಿಗೆ ರೆಕ್ಕೆ-ಪುಕ್ಕ ಸೇರಿ ನಿಮ್ಮ ಮೇಲೆ ಅಪನಂಬಿಕೆ ಉಂಟಾಗುವ ಸಂದರ್ಭ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈದಿನ ಮಾತುಕತೆಯಲ್ಲಿ ಅನಗತ್ಯ ವಿಚಾರಗಳನ್ನು ಎಳೆದು ತರಬೇಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top