“ಹ್ಯಾಟ್ರಿಕ್ ಹೀರೋ” ಶಿವ್ ರಾಜ್ ಕುಮಾರ್ ಅವರು ಜುಲೈ 12 ರಂದು ತಮ್ಮ 60 ವರ್ಷಕ್ಕೆ ಕಾಲಿಡಲಿದ್ದಾರೆ. ಈಗಾಗಿ ಅಭಿಮಾನಿಗಳಿಗೆ ಈ ದಿನ ಬಹಳಷ್ಟು ವಿಶೇಷತ್ನ್ನು ಕೂಡಿರುತ್ತದೆ. ಶಿವಣ್ಣ ಅವರ ಮುಂದಿನ ಸಿನಿಮಾದ ಪ್ರತಿಯೊಂದು ಅಪ್ಡೇಟ್ ಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಶಿವಣ್ಣ ಅಭಿಮಾನಿಗಳಿಗೆ ಘೋಸ್ಟ್ ಸಿನಿಮಾ ತಂಡ ಸರ್ಪ್ರೈಸ್ ನೀಡಿದೆ.
ಶಿವಣ್ಣನ 60 ನೇ ವರ್ಷದ ಹುಟ್ಟುಹಬ್ಬಕ್ಕೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಖ್ಯಾತ ನಟ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಲಿರುವ “ಘೋಸ್ಟ್” ಚಿತ್ರದ ಪೋಸ್ಟರ್ ಬಿಡುಗಡೆಯಾಗಲಿದೆ. ಇದಲ್ಲದೆ ಈ ಪೋಸ್ಟರ್ ಅನ್ನು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಲಿದ್ದಾರೆ.
#GHOST birthday special
“King Of All Masses”#Poster will be launched on July 12 on the occasion of Karunaada Chakravarthy @NimmaShivanna‘s 60th Birthday by Baadshah @KicchaSudeep sir@SandeshPro @MahenSimmha pic.twitter.com/JXEXY2Era6— SRINI (@lordmgsrinivas) July 10, 2022
ಕಿಂಗ್ ಆಫ್ ಆಲ್ ಮಾಸಸ್” ಎಂಬ ಅಕ್ಷರದಿಂದ ಕೂಡಿದ ವಿಭಿನ್ನ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆಮಾಡಲಿದ್ದಾರೆ. ಈ ಚಿತ್ರಕ್ಕಾಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದು, ಮಹೇಂದ್ರ ಸಿಂಹ ಈ ಚಿತ್ರದ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆಗಸ್ಟ್ ಅಂತ್ಯದ ವೇಳೆ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
