fbpx
ಸಮಾಚಾರ

ವಾರ ಭವಿಷ್ಯ: ಜುಲೈ 11 ರಿಂದ 17: ಹೇಗಿದೆ ದ್ವಾದಶ ರಾಶಿಗಳ ಫಲಾಫಲ

ಮೇಷ ರಾಶಿ

 

 

 

ಕುಟುಂಬದಲ್ಲಿ ಸಂತೋಷ, ತಾಳ್ಮೆ ಅತ್ಯಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡಲಿದ್ದೀರಿ, ಕೆಲಸ ಕಾರ್ಯಗಳು ಸಕಾಲಕ್ಕೆ ಆಗುವುದಿಲ್ಲ ವಿಳಂಬವಾಗಲಿದೆ, ಮನಸ್ಸಿನಲ್ಲಿ ಗೊಂದಲಮಯವಾದ ವಾತಾವರಣ, ಅಧಿಕ ತಿರುಗಾಟ,ಈ ವಾರ ಸ್ವಲ್ಪ ಎಚ್ಚರಿಕೆಯಿಂದ ಇರಿ.

ಪರಿಹಾರ:“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ” ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ ಸೂರ್ಯ ನಮಸ್ಕಾರವನ್ನು ಮಾಡಿ.

ವೃಷಭ ರಾಶಿ

 

 

 

ಸ್ನೇಹಿತರ ಭೇಟಿಯನ್ನು ಮಾಡುವ ಶುಭಯೋಗ, ಹಳೆ ಸಾಲ ಮರುಪಾವತಿಯನ್ನು ಮಾಡುತ್ತೀರ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ ಅಧಿಕವಾಗಲಿದೆ, ವೈಯಕ್ತಿಕ ಕೆಲಸಗಳು ಕೈಗೂಡುತ್ತವೆ, ಆದರೆ ದುಷ್ಟರಿಂದ ದೂರವಿರಿ, ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ಬಲಿಯಾಗಬೇಕಾಗುತ್ತದೆ, ಮಾಡುವ ಉದ್ಯೋಗದಲ್ಲಿ ವಾರಾಂತ್ಯದಲ್ಲಿ ಕಿರಿಕಿರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ, ಆದ್ದರಿಂದ ಜಾಗ್ರತೆಯಿಂದಿರಿ.

ಪರಿಹಾರ:ಶಿವ ಪಂಚಾಕ್ಷರಿ ಮಂತ್ರವಾದ “ ಓಂ ನಮಃ ಶಿವಾಯ” ಈ ಮಂತ್ರವನ್ನು 108 ಬಾರಿ ಜಪಿಸಿ ಸೋಮವಾರ ಶಿವಾಲಯಕ್ಕೆ ಭೇಟಿ ನೀಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮಿಥುನ ರಾಶಿ

 

 

 

ಈ ವಾರ ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಅಮೂಲ್ಯ ವಸ್ತುಗಳ ಖರೀದಿ ಮಾಡುವಿರಿ, ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ, ಯಾರನ್ನು ಹೆಚ್ಚಿಗೆ ನಂಬಬೇಡಿ, ಆಲಸ್ಯ ಮನೋಭಾವ, ಅತಿಯಾದ ಕೋಪ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಹಿತಶತ್ರುಗಳ ಬಾದೆ ನಿಮ್ಮನ್ನು ಕಾಡಲಿದೆ.

ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ ವೃದ್ಧ ದಂಪತಿಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದುಕೊಳ್ಳಿ.

ಕಟಕ ರಾಶಿ

 

 

 

ಸಹೋದ್ಯೋಗಿಗಳ ಜೊತೆ ಆತ್ಮೀಯತೆ ಹೆಚ್ಚಾಗಲಿದೆ, ಆದಷ್ಟು ಸ್ನೇಹದಿಂದ ವರ್ತಿಸಿ, ಮೂಗು ಮುರಿಯುವ ರೀತಿ ಮಾತನಾಡಬೇಡಿ, ಮಾತಿನ ಮೇಲೆ ನಿಗಾವಹಿಸಿ, ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯಾಗಲಿದೆ,ಗುರಿ ಸಾಧನೆಗೆ ಪರಿಶ್ರಮ ಪಡಬೇಕಾಗುತ್ತದೆ,ಹೊಸ ವ್ಯವಹಾರ ಆರಂಭಕ್ಕೆ ಒಳ್ಳೆಯ ಸಮಯವಿದು, ದೂರ ಪ್ರಯಾಣ ಮಾಡಬೇಕಾಗುತ್ತದೆ.

ಪರಿಹಾರ:ಆದಿತ್ಯ ಹೃದಯ ಪಾರಾಯಣ ಮಾಡಿ, ಬುಧವಾರ ಅಂಧಮಕ್ಕಳಿಗೆ ಅನ್ನದಾನವನ್ನು ಮಾಡಿ.

ಸಿಂಹ ರಾಶಿ

 

 

 

ಈ ವಾರ ಇತರರ ಮಾತಿನಿಂದ ಕಲಹಗಳು ಹೆಚ್ಚಾಗುತ್ತವೆ, ಮಾತಿನ ಚಕಮಕಿಗೆ ಇಳಿದು ಬಿಡುತ್ತೀರ, ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರಲಿವೆ, ನಿಮ್ಮ ಗೌರವಕ್ಕೆ ಧಕ್ಕೆಯಾಗಲಿದೆ, ಸಣ್ಣ ವಿಚಾರಗಳಿಂದ ಮನಸ್ತಾಪಗಳು ಮೂಡುತ್ತವೆ, ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ, ಅನಗತ್ಯ ಹಸ್ತಕ್ಷೇಪ ಸಲ್ಲದು.

ಪರಿಹಾರ:ಪ್ರತಿನಿತ್ಯ ಅಷ್ಟಲಕ್ಷ್ಮಿ ಸ್ತೋತ್ರವನ್ನು ಪಾರಾಯಣ ಮಾಡಿ ಶುಕ್ರವಾರ ಎಂಟು ಜನ ಸುಮಂಗಲಿಯರಿಗೆ ಅರಿಶಿನ-ಕುಂಕುಮವನ್ನು ಕೊಟ್ಟು ದೀರ್ಘದಂಡ ನಮಸ್ಕಾರ ಮಾಡಿ.

ಕನ್ಯಾ ರಾಶಿ

 

 

 

ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಾಗುವುದು, ಅನ್ಯ ಜನರಲ್ಲಿ ವೈಮನಸ್ಯ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ವಿಪರೀತ ಖರ್ಚು, ಮಕ್ಕಳಿಂದ ನಿಂದನೆಗೆ ಒಳಗಾಗಲಿದ್ದೀರ, ಸ್ವಯಂಕೃತ ಅಪರಾಧಗಳಿಂದ ಮನೋವ್ಯಥೆ.

ಪರಿಹಾರ:ಪ್ರತಿನಿತ್ಯ ಗುರುಗಳ ಆರಾಧನೆಯನ್ನು ಮಾಡಿ ಗುರುವಾರ ಶಿರಡಿ ಸಾಯಿಬಾಬಾರ ದರ್ಶನವನ್ನು ಮಾಡಿ ನಮಸ್ಕಾರ ಮಾಡಿ.

ತುಲಾ ರಾಶಿ

 

 

 

ಈ ವಾರ ಅನ್ಯರಲ್ಲಿ ವೈಮನಸ್ಯ, ಪರರ ಧನ ಪ್ರಾಪ್ತಿ, ದ್ರವ್ಯಲಾಭ, ಸುಖ ಭೋಜನ ಪ್ರಾಪ್ತಿಯಾಗಲಿದೆ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಕಷ್ಟ ಕಾರ್ಪಣ್ಯಗಳು ಹೆಚ್ಚಾಗುವವು, ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗಲಿದೆ.

ಪರಿಹಾರ:“ಓಂ ನಮೋ ಭಗವತೇ ವಾಸುದೇವಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ ಶನಿವಾರ ವಿಷ್ಣು ದೇವಾಲಯಕ್ಕೆ ಹೋಗಿ ದ್ವಾದಶ ಪ್ರದಕ್ಷಿಣಾ ನಮಸ್ಕಾರಗಳನ್ನು ಮಾಡಿ.

ವೃಶ್ಚಿಕ ರಾಶಿ

 

 

 

ಅಪರಿಚಿತರಿಂದ ಕಲಹಗಳು ಉಂಟಾಗಲಿವೆ, ನಿಮ್ಮ ಮಾತಿನಲ್ಲಿ ಹಿಡಿತವಿರಲಿ,ಅತಿಯಾದ ನಿದ್ರೆ, ಮಹಿಳೆಯರಿಗೆ ವಿಶೇಷವಾದ ಲಾಭವಾಗಲಿದೆ, ಅಧಿಕವಾದ ಖರ್ಚು,ಪ್ರಿಯ ಜನರ ಭೇಟಿಯನ್ನು ಮಾಡಲಿದ್ದೀರಿ, ಮಾನಸಿಕ ನೆಮ್ಮದಿ ವಾರಾಂತ್ಯದಲ್ಲಿ ಪ್ರಾಪ್ತಿಯಾಗಲಿದೆ.

ಪರಿಹಾರ: ದಕ್ಷಿಣಾಭಿಮುಖವಾಗಿರುವ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ ಮತ್ತು ಮಂಗಳವಾರ ನಾಟಿ ತುಳಸಿಯನ್ನು ಅರ್ಪಿಸಿ.

ಧನಸ್ಸು ರಾಶಿ

 

 

 

ಸ್ತ್ರೀಯರಿಗೆ ಅನುಕೂಲ, ಮಾತೃವಿನಿಂದ ಸಹಾಯ,ಸ್ಥಳ ಬದಲಾವಣೆ ,ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ, ವೃತ್ತಿಯಲ್ಲಿ ಯಶಸ್ಸನ್ನು ಗಳಿಸುವಿರಿ, ಉದ್ಯೋಗದಲ್ಲಿ ಪ್ರಗತಿ, ಅಧಿಕವಾದ ಖರ್ಚು, ಎಚ್ಚರದಿಂದಿರಿ.

ಪರಿಹಾರ:ಪ್ರತಿನಿತ್ಯ ಅಶ್ವತ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ, ಕುಲ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ನಮಸ್ಕಾರ ಮಾಡಿ.

ಮಕರ ರಾಶಿ

 

 

 

ಆತ್ಮೀಯರ ಆಗಮನದಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ, ಪ್ರತಿಭೆಗೆ ತಕ್ಕ ಫಲ ಲಭಿಸಲಿದೆ, ಬಾಕಿ ಹಣ ನಿಮ್ಮ ಕೈ ಸೇರಲಿದೆ, ಮಾನಸಿಕ ನೆಮ್ಮದಿ,ಆಧ್ಯಾತ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ ನಿಮಗೆ ಲಭ್ಯವಾಗಲಿದೆ.

ಪರಿಹಾರ:ಪ್ರತಿನಿತ್ಯ ಲಕ್ಷ್ಮೀನರಸಿಂಹ ಸ್ತೋತ್ರವನ್ನು ಪಾರಾಯಣ ಮಾಡಿ ಬಡ ಮಕ್ಕಳಿಗೆ ಅನ್ನದಾನವನ್ನು ಮಾಡಿ.

ಕುಂಭ ರಾಶಿ

 

 

 

ಈ ವಾರದಲ್ಲಿ ಆತ್ಮೀಯರಿಂದ ಸಹಾಯವನ್ನು ಪಡೆಯಲಿದ್ದೀರಿ, ವಾಹನ ಚಾಲನೆ ಮಾಡುವಾಗ ಜಾಗ್ರತೆಯಿಂದಿರಿ, ಅಪಘಾತವಾಗುವ ಸಾಧ್ಯತೆಯಿದೆ, ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಲಿದೆ, ಭೂಮಿ ಖರೀದಿ ಮಾಡುವ ಶುಭಯೋಗ, ಉತ್ತಮ ಬುದ್ಧಿಶಕ್ತಿ ಪ್ರಾಪ್ತಿಯಾಗಲಿದೆ, ಸಂಗಾತಿಯ ಸಲಹೆ ಪಡೆಯುವುದು ಉತ್ತಮ.

ಪರಿಹಾರ:“ಓಂ ಸುಬ್ರಮಣ್ಯಯ ನಮಃ” ಈ ಮಂತ್ರವನ್ನು ಜಪಿಸಿ ಸುಬ್ರಹ್ಮಣ್ಯ ಷಷ್ಠಿಯ ದಿನ ಸುಬ್ರಹ್ಮಣ್ಯನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮೀನ ರಾಶಿ

 

 

 

ರಾಜಕೀಯ ಸಭೆ ಸಮಾರಂಭಗಳಲ್ಲಿ ಭಾಗಿಯಾಗಲಿದ್ದೀರಿ, ಗೆಳೆಯರಿಂದ ಅನರ್ಥಗಳು ಉಂಟಾಗಲಿವೆ, ದೈವಿಕ ಚಿಂತನೆ ಮಾಡಲಿದ್ದೀರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ ಉಂಟಾಗಲಿದೆ,ವ್ಯಾಪಾರದಲ್ಲಿ ಏರುಪೇರಾಗಲಿದೆ,ಕೆಲಸ ಕಾರ್ಯದಲ್ಲಿ ವಿಳಂಬ,ಮನಸಿನಲ್ಲಿ ಕೆಟ್ಟ ಆಲೋಚನೆ, ಋಣಬಾಧೆ.

ಪರಿಹಾರ:“ಓಂ ಗಂ ಗಣಪತಯೇ ನಮಃ” ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ ಮಂಗಳವಾರ ಅರ್ಕ ಪುಷ್ಪವನ್ನು ಗಣೇಶನಿಗೆ ಅರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top